Advertisement

ಎಲ್ಲಾ ಭಾಷೆಗೂ ಈ ದೇಶದಲ್ಲಿ ಸಮಾನ ಮಾನ್ಯತೆಯಿದೆ: ಡಿ.ಕೆ. ಶಿವಕುಮಾರ್

04:35 PM Apr 28, 2022 | Team Udayavani |

ಬೆಂಗಳೂರು: ನಮ್ಮ ದೇಶ ಅನೇಕ ಭಾಷೆಗಳ ಗೂಡಾಗಿದೆ. ಅವರವರಿಗೆ ಅವರವರ ಸ್ವಾಭಿಮಾನವಿದೆ. ನಮ್ಮ ರಾಜ್ಯದಲ್ಲೇ ಕೊಡಗಿಗೆ ಹೋದರೆ ಒಂದು, ಮಂಗಳೂರಿಗೆ ಹೋದರೆ ಒಂದು ಭಾಷೆ ಇದೆ. ಹೀಗಾಗಿ ಯಾವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕನ್ನಡಿಗರು, ನಮ್ಮ ಧ್ವಜ‌ವಿದೆ, ಭಾಷೆಯಿದೆ. ನಮ್ಮದೇ ಆದ ಸ್ವಾಭಿಮಾನವಿದೆ ಎಂದರು.

ಐನೂರು ರೂಪಾಯಿ ನೋಟಿನಲ್ಲಿ ಎಲ್ಲ ಭಾಷೆಗಳಿವೆ. ಕನ್ನಡ, ತೆಲುಗು, ತಮಿಳು ಭಾಷೆ ಇದೆ. ದೇಶದ ಎಲ್ಲಾ ಕಡೆ ಈ ನೋಟು ಚಲಾವಣೆ ಆಗುತ್ತದೆ ಎಂದಮೇಲೆ, ಎಲ್ಲಾ ಭಾಷೆಗೂ ಈ ದೇಶದಲ್ಲಿ ಸಮಾನ ಮಾನ್ಯತೆಯಿದೆ ಎಂದರು.

Koo App

ಭಾರತದಲ್ಲಿ‌ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ.‌ ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ಹೆಮ್ಮೆಯ ಕನ್ನಡಿಗನಾಗಿ ಮತ್ತು ಕಾಂಗ್ರೆಸ್ಸಿಗನಾಗಿ ನೆನಪಿಸಬಯಸುತ್ತೇನೆ.‌

Advertisement

D K Shivakumar (@dkshivakumar_official) 28 Apr 2022

ಇದನ್ನೂ ಓದಿ:ಸುದೀಪ್ ಟ್ವೀಟ್ ಸಮರ: ಅಜಯ್ ದೇವಗನ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನೆ

ಈ ಬಗ್ಗೆ ಮಾತನಾಡಿದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದಿ ರಾಷ್ಟ್ರ ಭಾಷೆ ಎಂದು ಯಾರೋ ಒಬ್ಬರು ಹೇಳಿದರೆಂದು ನಾವು ಒಪ್ಪಕ್ಕಾಗಲ್ಲ. ನಮಗೆ ಕನ್ನಡ ಭಾಷೆ ಪ್ರಾಮುಖ್ಯ. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆಯಾಗಬೇಕು. ಯಾರೋ ಒಬ್ಬರು ಹೇಳಿದ ತಕ್ಷಣ ನಾವು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next