Advertisement

“ಎಲ್ಲ ವಿಧದ ಕಲಾವಿದರೂ ಮುಖ್ಯವಾಹಿನಿಗೆ ಬರುವಂತಾಗಬೇಕು’

01:00 AM Mar 06, 2019 | Team Udayavani |

ಮಲ್ಪೆ: ಸಾಂಸ್ಕೃತಿಕ ಆಯಾಮಗಳು ಸ್ಪರ್ಧಾತ್ಮಕ ಗುಣಮಟ್ಟಕ್ಕೆ ತೆರೆದುಕೊಂಡಿವೆ. ಕಲಾಭಿಮಾನಿಗಳ ನಿರೀಕ್ಷೆ ತಲುಪಲು ಸಾಕಷ್ಟು ಶ್ರದ್ಧೆಯಿಂದ ಶ್ರಮ ವಹಿಸುವ ಕಲಾವಿದರುಗಳಿಗೂ ಒಳಿತಾಗಬೇಕು. ಎಲ್ಲ ವಿಧದ ಕಲಾವಿದರೂ ಅತಿ ಅಗತ್ಯವಾಗಿ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಹಕಾರಿ ಧುರೀಣ ಜಯಕರ್‌ ಶೆಟ್ಟಿ ಇಂದ್ರಾಳಿ ಹೇಳಿದರು.

Advertisement

ಶುಕ್ರವಾರ ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಿದ ರಂಗಹಬ್ಬದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗ ನಿರ್ದೇಶಕ ಡಾ| ಸಾಸ್ವೆಹಳ್ಳಿ ಸತೀಶ್‌ ಮುಖ್ಯಅತಿಥಿಯಾಗಿ ಮಾತನಾಡಿ, ಸರಕಾರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುವ  ಪ್ರೋತ್ಸಾಹ ಮತ್ತು ಸಹಾಯಧನದ ಹೆಚ್ಚಳ, ಅಗತ್ಯದ
ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಪ್ರಸಾದನ ಕಲಾವಿದ ಲಿಯಾಕತ್‌ ಆಲಿ ಅವರನ್ನು ರಂಗ ಸಾಧಕ ಸಮ್ಮಾನ ನೀಡಿ ಗೌರವಿಸಲಾಯಿತು.
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ,  ಉದ್ಯಮಿಗಳಾದ ಪ್ರಭಾಕರ ಪೂಜಾರಿ ಕಾಪು, ಸದಾನಂದ ಸಾಲ್ಯಾನ್‌, ವಿಜಯ  ಶ್ರೀಯಾನ್‌, ಉಡುಪಿ ನೂತನ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೆ„ಟಿ ಅಧ್ಯಕ್ಷೆ ಸುಮಿತ್ರಾ ಆರ್‌., ನಗರಸಭಾ ಸದಸ್ಯ ವಿಜಯ್‌ ಕೊಡವೂರು,  ಸುಮನಸಾ ಅಧ್ಯಕ್ಷ ಪ್ರಕಾಶ್‌ ಜಿ.ಕೊಡವೂರು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಪ್ರಜ್ಞಾ ಅಮೀನ್‌ ಸ್ವಾಗತಿಸಿದರು. ಕವನ ವಂದಿಸಿದರು. ಪ್ರಜ್ಞಾಶ್ರೀ  ಕಾರ್ಯಕ್ರಮ ನಿರೂಪಿಸಿದರು.

Advertisement

ಬಳಿಕ ಹೊಂಗಿರಣ ಶಿವಮೊಗ್ಗ ತಂಡದಿಂದ “ವೀರ ಉತ್ತರಕುಮಾರ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next