ಕಲಬುರಗಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಈ ಬಾರಿ ನ.11ರಿಂದ 13ರವರೆಗೆ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಶೀಘ್ರವೇ ಸರ್ಕಾರದಿಂದ ಅಧಿಕೃತ ಘೋಷಣೆ ಆಗಲಿದೆ ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸೆ.21, 22 ಮತ್ತು 23ರಂದು ನಡೆಸಲು ತೀರ್ಮಾನಿಸಲಾಗಿತ್ತು ಎಂದರು.
ಹಾವೇರಿಯಲ್ಲಿ ಪ್ರಮುಖವಾಗಿ ಸಿರಿಗೆರೆ ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆಯಾದ್ದರಿಂದ ಖುದ್ದು ಸಿರಿಗೆರೆ ಶ್ರೀಗಳೇ ಮಾತನಾಡಿ ದಿನಾಂಕ ಬದಲಿಸುವ ನಿರ್ಧಾರ ಪ್ರಕಟಿಸಿದರು. ಸಿಎಂ ಜತೆ ಮಾತನಾಡಿ ಮನವೊಲಿಸಿದ್ದಾರೆ.
ನ.11 ಕನಕ ಜಯಂತಿ, 12 ಎರಡನೇ ಶನಿವಾರ ಮತ್ತು 13 ರವಿವಾರ ಆಗಿರುವುದರಿಂದ ಮೂರು ದಿನ ರಜೆ. ಹೀಗಾಗಿ ಓಡಿಯ ಕಿರಿಕಿರಿಯೂ ತಪ್ಪುತ್ತದೆ. ಸಮ್ಮೇಳನಕ್ಕೆ ಯಾವುದೇ ಅವಸರವೂ ಇರುವುದಿಲ್ಲ. ಆದ್ದರಿಂದ ನ.11ರಿಂದ ಸಮ್ಮೇಳನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಲಾಗಿದೆ ಎಂದು ಮಹೇಶ್ ಜೋಶಿ ತಿಳಿಸಿದ್ದಾರೆ.