Advertisement

ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವಾಡುತ್ತಾರೇಯೇ ಎಂ.ಎಸ್.ಧೋನಿ?

03:26 PM May 20, 2022 | Team Udayavani |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಇಂದು ತಮ್ಮ ಅಂತಿಮ ಲೀಗ್ ಪಂದ್ಯವನ್ನಾಡಲಿದೆ. ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಫ್ ಗೆ ತೇರ್ಗಡೆ ಹೊಂದಿದ್ದರೆ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2022ರ ಕೂಟದ ಕೊನೆಯ ಪಂದ್ಯವಾಡುತ್ತಿದೆ.

Advertisement

ಕಳೆದ ಬಾರಿಯ ಚಾಂಪಿಯನ್ ತಂಡ ಸಿಎಸ್ ಕೆ ಈ ಬಾರಿ ಕಳಪೆ ಪ್ರದರ್ಶನ ನೀಡಿ 9ನೇ ಸ್ಥಾನದಲ್ಲಿದೆ. ಇಂದಿನ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೂ ಅಥವಾ ಸೋತರೂ ಸಿಎಸ್ ಕೆ 9ನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ.

ಆದರೆ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈ ಪಂದ್ಯವೇ ಅಂತಿಮ ಐಪಿಎಲ್ ಪಂದ್ಯವಾಗಲಿದೆಯೇ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡಿದೆ. ಈ ಬಾರಿಯ ಕೂಟದ ಆರಂಭದಲ್ಲಿ ನಾಯಕತ್ವ ತ್ಯಜಿಸಿ ರವೀಂದ್ರ ಜಡೇಜಾಗೆ ಕ್ಯಾಪ್ಟನ್ ಪಟ್ಟ ಕಟ್ಟಿದ್ದ ಧೋನಿ ನಂತರ ಅನಿವಾರ್ಯವಾಗಿ ನಾಯಕತ್ವ ವಹಿಸಿದ್ದರು. ಆದರೆ 40 ವರ್ಷ ಪ್ರಾಯದ ಧೋನಿ ಮುಂದೆ ಆಡುತ್ತಾರೆಯೇ ಎನ್ನುವ ಬಗ್ಗೆ ಸ್ವತಃ ಧೋನಿ ಖಚಿತ ಪಡಿಸಬೇಕಿದೆ.

ಇದನ್ನೂ ಓದಿ:ಆಸಕ್ತಿಯೇ ನಮ್ಮನ್ನು ಮುನ್ನಡೆಸುವ ದೊಡ್ಡ ಶಕ್ತಿ : ಘಟಂ ವಾದಕ ಗಿರಿಧರ್‌ ಉಡುಪ ಮನದ ಮಾತು…

ಮರಳಿ ನಾಯಕತ್ವ ವಹಿಸಿದ ಸಮಯದಲ್ಲಿ ಧೋನಿ ಈ ಬಗ್ಗೆ ಮಾತನಾಡಿದ್ದರು. “ನೀವು ಖಂಡಿತವಾಗಿಯೂ ನನ್ನನ್ನು ಹಳದಿ ಜರ್ಸಿಯಲ್ಲಿ ನೋಡುತ್ತೀರಿ. ಈ ಹಳದಿ ಜೆರ್ಸಿಯೋ ಅಥವಾ ಇನ್ನಾವುದೋ ಹಳದಿ ಜೆರ್ಸಿಯೋ ಕಾದು ನೋಡಬೇಕು” ಎಂದು ಧೋನಿ ಮಾರ್ಮಿಕವಾಗಿ ನುಡಿದಿದ್ದರು.

Advertisement

ರಾಯಲ್ ಕದನ: ಈಗಾಗಲೇ ಕೂಟದಿಂದ ನಿರ್ಗಮಿಸಿರುವ ಧೋನಿ ಪಡೆಗೂ ಇದು ಕೊನೆಯ ಪಂದ್ಯ. 5ನೇ ಗೆಲುವನ್ನು ಸಂಭ್ರಮಿಸುವುದು ಚೆನ್ನೈ ಗುರಿ. ಆದರೆ ಗೆದ್ದರೂ ಸೋತರೂ ಚೆನ್ನೈ ಉಳಿಯುವುದು ಮಾತ್ರ 9ರಷ್ಟು ಕೆಳ ಸ್ಥಾನದಲ್ಲೇ.

ರಾಜಸ್ಥಾನ್‌ ರಾಯಲ್ಸ್‌ ಸಾಮಾನ್ಯ ಗೆಲುವು ಸಾಧಿಸಿದರೂ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆಯುತ್ತದೆ. ಸದ್ಯ ಅದು 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಗೆದ್ದರೆ ಉತ್ತಮ ರನ್‌ರೇಟ್‌ ಆಧಾರದಲ್ಲಿ ಲಕ್ನೋವನ್ನು ಮೂರಕ್ಕೆ ಇಳಿಸಲಿದೆ.  ರಾಜಸ್ಥಾನ್‌ +0.304 ರನ್‌ ರೇಟ್‌ ಹೊಂದಿದ್ದರೆ, ಲಕ್ನೋ +0.251 ರನ್‌ರೇಟ್‌ ಗಳಿಸಿದೆ.

ಅಕಸ್ಮಾತ್‌ ಸೋತದ್ದೇ ಆದರೆ ರಾಜಸ್ಥಾನ್‌ಗೆ ನಷ್ಟವೇನೂ ಇಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಆಗ ಅದು ಮೂರರಲ್ಲೇ ಉಳಿಯಬಹುದು ಅಥವಾ ನಾಲ್ಕಕ್ಕೆ ಇಳಿಯಲೂಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next