Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸೇನ್‌ ಗೆಲುವಿನ ಆರಂಭ

12:21 AM Mar 15, 2023 | Team Udayavani |

ಬರ್ಮಿಂಗ್‌ಹ್ಯಾಮ್‌: ಮಂಗಳವಾರ ಮೊದಲ್ಗೊಂಡ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌”ನಲ್ಲಿ ಭಾರತದ ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌ ಗೆಲುವಿನ ಆರಂಭ ಪಡೆದಿದ್ದಾರೆ.

Advertisement

ವಿಶ್ವದ ನಂ. 9ನೇ ಆಟಗಾರನಾಗಿರುವ ಪ್ರಣಯ್‌ ತೀವ್ರ ಪ್ರತಿರೋಧ ಒಡ್ಡಿದ ತೈವಾನ್‌ನ ಝು ವೀ ವಾಂಗ್‌ ಅವರನ್ನು 21-19, 22-20 ಅಂತರದಿಂದ ಮಣಿಸಿದರು. 49 ನಿಮಿಷಗಳ ಕಾಲ ಇವರ ಆಟ ಸಾಗಿತು. ಇದರೊಂದಿಗೆ ವಾಂಗ್‌ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪ್ರಣಯ್‌ 5-3ರ ಮುನ್ನಡೆ ಸಾಧಿಸಿದರು.
ಮುಂದಿನ ಸುತ್ತಿನಲ್ಲಿ ಪ್ರಣಯ್‌ ಇಂಡೋನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್‌ ಅಥವಾ ಥಾಯ್ಲೆಂಡ್‌ನ‌ ಕಾಂತಪೋನ್‌ ವಾಂಗ್‌ಶರೋನ್‌ ಅವರನ್ನು ಎದುರಿಸುವರು.

ಲಕ್ಷ್ಯ ಸೇನ್‌ ಚೈನೀಸ್‌ ತೈಪೆಯ ಚೌ ಟೀನ್‌ ಚೆನ್‌ ಅವರನ್ನು 21-18, 21-19 ಅಂತರದಿಂದ ಹಿಮ್ಮೆಟ್ಟಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next