Advertisement

“ಗ್ರಾಮದ ಅಭಿವೃದ್ಧಿಗೆ ಸರ್ವ ಸಹಕಾರ’

12:09 PM Apr 19, 2021 | Adarsha |

ಮುಂಬಯಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಮತ್ತು ಕ. ರಾ. ಪ್ರಾ. ಶಾ. ಶಿ. ಸಂಘ ಕಾರ್ಕಳ ತಾಲೂಕು ಶಾಖೆಯ ಸಂಯುಕ್ತ ಆಶ್ರಯದಲ್ಲಿ ಮುಂಬಯಿ ಉದ್ಯಮಿ, ಮುದ್ರಾಡಿಯ ಸಿರಿಬೀಡು ದಿವ್ಯಾಸಾಗರ್‌ ದಿವಾಕರ್‌ ಎನ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಕಾರ್ಕಳ ತಾಲೂಕಿನ ಸಮಸ್ತ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅತ್ಯವಶ್ಯಕವಾದ ಗುರುತಿನ ಕಾರ್ಡ್‌ಗಳನ್ನು ಉಪಸ್ಥಿತರಿದ್ದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಶಿಕ್ಷಕರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

Advertisement

ಈ ಸಂದರ್ಭ ಮುಂಬಯಿ ಉದ್ಯಮಿ ಮುದ್ರಾಡಿ ದಿವಾಕರ್‌ ಶೆಟ್ಟಿ ಅವರನ್ನು ಸಮಾಜಪರ ಕಾರ್ಯಕ್ರಮಗಳನ್ನು ಗುರುತಿಸಿ ಕೃತಜ್ಞತಾಪೂರ್ವಕವಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ಸಮಾಜ ಮತ್ತು ದೇಶದ ಆಸ್ತಿ. ದೇಶದ ಭವಿಷ್ಯ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಅವರ ಸೇವಾ ಕಾರ್ಯಗಳು ಅಜರಾಮರ. ಮುದ್ರಾಡಿ ಗ್ರಾಮದ ಅಭಿವೃದ್ಧಿಗೆ ನನ್ನ ಎಲ್ಲ ರೀತಿಯ ಸಹಕಾರವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳದ ಶಿಕ್ಷಕ ಸ್ನೇಹಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್‌. ಶಶಿಧರ್‌, ಕ.ರಾ.ಪ್ರಾ.ಶಾ.ಶಿ. ಸಂಘ ಕಾರ್ಕಳ ತಾ| ಅಧ್ಯಕ್ಷ ರಮಾನಂದ ಶೆಟ್ಟಿ, ಹೆಬ್ರಿ ವಲಯದ ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್‌, ಕ.ರಾ.ಪ್ರಾ.ಶಾ.ಶಿ.ಸಂಘ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜೀವ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಂಡಾರಿ, ಕ.ರಾ.ಸ.ನೌ.ಸಂ. ಹೆಬ್ರಿ ತಾ| ಅಧ್ಯಕ್ಷ ಹರೀಶ್‌ ಪೂಜಾರಿ.ಎಸ್‌., ಕ.ರಾ.ಪ್ರಾ.ಶಾ. ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಾರ್ಕಳ ತಾ| ಇದರ ಅಧ್ಯಕ್ಷ ಆನಂದ ಪೂಜಾರಿ, ಉಡುಪಿ ಜಿಲ್ಲೆಯ ದೆ„ಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next