Advertisement
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಸರ್ವಜ್ಞ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದಕ್ಕೆ ಸರ್ವಜ್ಞರ ಕೊಡುಗೆಯೂ ಕಾರಣ. ಅವರು ರಚಿಸಿರುವ ವಚನಗಳಿಗೆ ಸಾರ್ವಕಾಲಿಕ ಮನ್ನಣೆ ದೊರಕಿರುವುದು ಅವರ ಜ್ಞಾನ ಭಂಡಾರಕ್ಕೆ ಹಿಡಿದ ಕೈಗನ್ನಡಿ ಯಾಗಿದೆ ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ನುಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿವಾಜಿ ಅವರ ಜೀವನ ಮೌಲ್ಯವನ್ನು ತಿಳಿಸುವುದರ ಮೂಲಕ ಯುವ ಪೀಳಿ ಗೆಯಲ್ಲಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ಅವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ ಶಿವಾಜಿಯವರ ತಾಯಿ ಜೀಜಾಬಾಯಿ ಅವರು ಶಿವಾಜಿ ಅವರನ್ನು ಬೆಳಸಿದಂತೆ, ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಶಿವಾಜಿಯ ಆದರ್ಶಗಳನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು
Related Articles
Advertisement
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಾಮಾನ್ಯ ಜನರಲ್ಲಿ ಇದ್ದಂತಹ ಕಂದಾಚಾರ, ಮೂಡನಂಬಿಕೆ ಇವುಗಳನ್ನು ದೂರಗೊಳಿಸಿದ ಮಹಾನ್ ವ್ಯಕ್ತಿ ಸರ್ವಜ್ಞ ಅವರ ಜ್ಞಾನ ಭಂಡಾರವನ್ನು ತಿಳಿಸಿದರು ಮೊಘಲರು ಮತ್ತು ನಿಜಾಮರ ವಿರುದ್ಧ ಹೋರಾಡಿದ ಧೀಮಂತ ವ್ಯಕ್ತಿ ಶಿವಾಜಿ. ಬಾಲ್ಯದಲ್ಲಿ ತನ್ನ ತಾಯಿಯಾದ ಜೀಜಾಬಾಯಿಯಿಂದ ವೀರರ ಧೀರರ ಕತೆಗಳಿಂದ ಪ್ರೇರೇಪಣೆ ಪಡೆದು ಬೆಳೆದರು ಎಂದು ಅವರು ತಿಳಿಸಿದರು. ಮರಾಠ ಸಮಾಜದ ಜಿಲ್ಲಾಧ್ಯಕ್ಷ ರಾಜಾರಾವ್ ಕುಲಾಲ ಕುಂಬಾರ ಸಮಾಜದ ಮುಖಂಡ ನಾಣಯ್ಯ ತಹಶೀಲ್ದಾರ್ ಕುಸುಮ ಉಪಸ್ಥಿತರಿದ್ದರು.ದರ್ಶನ ಸ್ವಾಗತಿಸಿದರು, ಮಂಜುನಾಥ್ ನಿರೂಪಿಸಿದರು. ರಮೇಶ್ ವಂದಿಸಿದರು. ಅಸಾಧಾರಣ ಕವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಬಿ.ಎಸ್.ಲೋಕೋಶ್ ಸಾಗರ್ ಅವರು ಮಾತನಾಡಿ ಬಸವ ಸಾರ ಮತ್ತು ಮಲ್ಲಮ್ಮ ಸರ್ವಜ್ಞರ ತಂದೆ-ತಾಯಿ. ಅಸಾಧಾರಣ ಕವಿಯಾದ ಸರ್ವಜ್ಞ ಅವರು ತ್ರಿಪದಿಗಳನ್ನು ರಚಿಸಿ ಕಣ್ಣಿಗೆ ಆಜನರಿಗೆ ಪರಿಚಯಿಸಿ ದೇಶಕ್ಕೆ ಜ್ಞಾನವನ್ನು ನೀಡಿದ ದಾರ್ಶನಿಕರು. ಎರಡು ಸಾವಿರಕ್ಕೂ ಹೆಚ್ಚು ತ್ರಿಪದಿಗಳಮೂಲಕ ಸರ್ವಜ್ಞರು ಸಾರ್ವಕಾಲಿಕ ಸತ್ಯವನ್ನು ತಿಳಿಸಿದ್ದಾರೆ ಎಂದರು. ಇಂತಹ ಸಾಧಕರ ಬುನಾದಿಯಿಂದ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು.