Advertisement

ಎರಡು ತಿಂಗಳ ಉಚಿತ ಪಡಿತರ, ಟ್ಯಾಕ್ಸಿ ಡ್ರೈವರ್ ಗಳಿಗೆ 5000 ರೂ.: ಮುಖ್ಯಮಂತ್ರಿ ಕೇಜ್ರಿವಾಲ್

01:04 PM May 04, 2021 | Team Udayavani |

ನವದೆಹಲಿ: ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಲವೊಂದು ಸೌಲಭ್ಯಗಳನ್ನು ಘೋಷಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಜ್ರಿವಾಲ್, ರಾಜ್ಯದ ಎಲ್ಲ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಡ್ರೈವರ್‍ ಗಳಿಗೆ ಆರ್ಥಿಕ ಬೆಂಬಲ ನೀಡಿದ್ದಾರೆ. ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಡ್ರೈವರ್‍ ಗಳಿಗೆ ತಲಾ 5000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಕೋವಿಡ್‍ನಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಡ್ರೈವರ್ ಗಳಿಗೆ ಈ ಹಣ ಸಹಾಯಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಮುಂದಿನ ಎರಡು ತಿಂಗಳು ಉಚಿತವಾಗಿ ಪಡಿತರ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗಂತ ಎರಡು ತಿಂಗಳ ವರೆಗೆ ಲಾಕ್ ಡೌನ್ ಮುಂದುವರೆಯುವುದಿಲ್ಲ. ಇದು ಕೇವಲ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಎರಡು ತಿಂಗಳು ಪಡಿತರ ನೀಡಲಾಗುತ್ತದೆ. ಈ ಸೌಲಭ್ಯವನ್ನು 72 ಜನರು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ ಮಿತಿ ಮೀರಿ ಹರಡುತ್ತಿದೆ. ಕೋವಿಡ್ ಸೋಂಕಿನ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಅಲ್ಲಿಯ ಸರ್ಕಾರ ಕೋವಿಡ್ ವಿರುದ್ಧದ ಹೋರಾಟ ಚುರುಕುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next