Advertisement
ಅಳಿವೆಬಾಗಿಲು ವ್ಯಾಪ್ತಿಯಲ್ಲಿರುವ ಹೂಳು ಸಂಪೂರ್ಣವಾಗಿ ತೆಗೆದರೆ, ಮೀನು ಗಾರಿಕಾ ದೋಣಿಗಳ ಸಂಚಾರ, ಲಕ್ಷದ್ವೀಪಕ್ಕೆ ಮಿನಿ ಹಡಗುಗಳ (ಮಂಜಿ) ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲಾರದು.
ಬಂದರು ಇಲಾಖೆ ಕೈಗೊಂಡ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಕಳುಹಿಸಿತ್ತು. ಕಳೆದ ವರ್ಷ ಕೇಂದ್ರ ಸರಕಾರವೂ ಇದಕ್ಕೆ ಹಸುರು ನಿಶಾನೆ ತೋರಿದ್ದು, ಮಹತ್ವದ ಯೋಜನೆ ಜಾರಿಗೆ ಬರುವ ಸೂಚನೆ ದೊರೆತಿತ್ತು. ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೂಡಲಿದ್ದು, ಕೇಂದ್ರ ಸರಕಾರದಿಂದ 14.5 ಕೋ.ರೂ., ಇಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರಕಾರ ನೀಡಲಿದೆ. ‘ಸಾಗರ ಮಾಲ’ ಯೋಜನೆಯಡಿಯಲ್ಲಿ ‘ಕೋಸ್ಟಲ್ ಬರ್ತ್ ಸ್ಕೀಂ’ನಡಿಯಲ್ಲಿ ಈ ಯೋಜನೆಗೆ ಒಪ್ಪಿಗೆ ದೊರಕಿದೆ. ಅಳಿವೆಬಾಗಿಲಿನಿಂದ 2ನೇ ಹಂತದ ವಾಣಿಜ್ಯ ಧಕ್ಕೆ ಇರುವ ಸುಮಾರು 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಹೂಳೆತ್ತಲು ಪ್ರಸ್ತುತ ಮಂಗಳೂರಿನಲ್ಲಿ ಗ್ರ್ಯಾಬ್ ಡ್ರೆಜ್ಜರ್‌ಗಳು ಇದ್ದು, ಮುಂದೆ ಬೃಹತ್ ಪ್ರಮಾಣದ ಕಟ್ಟರ್ ಸಕ್ಷನ್ ಮಾದರಿಯ ಡ್ರೆಜ್ಜಿಂಗ್ ಯಂತ್ರೋಪಕರಣಗಳು ಬರಲಿವೆ. ಲಕ್ಷದ್ವೀಪ, ಮಂಗಳೂರು ಮಧ್ಯೆ ಪ್ರಸ್ತುತ ವಾರ್ಷಿಕವಾಗಿ 1.2 ಲಕ್ಷ ಮೆಟ್ರಿಕ್ ಟನ್ ವಹಿವಾಟು ರಪ್ತು, ಆಮದು ಮೂಲಕ ನಡೆಯುತ್ತಿದೆ.
Related Articles
ಮೀನುಗಾರಿಕಾ ದೋಣಿಗಳ ಸಂಚಾರ, ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಅಳಿವೆಬಾಗಿಲಿನಲ್ಲಿ ತುಂಬಿ ರುವ ಬೃಹತ್ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿ. ಇದರಿಂದ ಹಲವು ಅವಘಡಗಳು ಸಂಭವಿಸಿದ ಉದಾ ಹರಣೆಗಳಿವೆ. ಪ್ರತೀ ವರ್ಷ ಅಳಿವೆಬಾಗಿಲು ಪ್ರದೇಶ ಬೋಟುಗಳಿಗೆ ಆತಂಕದ ಜಾಗವಾಗಿ ಪರಿಣಮಿಸಿದೆ. ಎರಡು ವರ್ಷಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್ ಬೋಟೊಂದು ಅಳಿವೆಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಇನ್ನೂ ಅದರ ತೆರವು ನಡೆಯದ ಹಿನ್ನೆಲೆಯಲ್ಲಿ ಮೀನುಗಾರಿಕಾ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿವೆ.
Advertisement
2,000 ಮೀನುಗಾರಿಕಾ ಬೋಟುಗಳ ಸಂಚಾರಇಲ್ಲಿನ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಒಟ್ಟು ಸುಮಾರು 2,000 ಮೀನುಗಾರಿಕಾ ಬೋಟುಗಳಿವೆ. 35,875 ಮಂದಿ ನೇರವಾಗಿ, ಸುಮಾರು 70,000ಕ್ಕಿಂತಲೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕಾ ಬೋಟ್‌ಗಳಿಗೆ ಅಳಿವೆಬಾಗಿಲಿನಲ್ಲಿ 3 ಮೀಟರ್ ಆಳಕ್ಕೆ ಡ್ರೆಜ್ಜಿಂಗ್ ಮಾಡಿದರೆ ಸಾಕಾಗುತ್ತದೆ. ಆದರೆ, ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್)ವಾಣಿಜ್ಯ ಬೋಟು, ಮಂಜಿಗಳಿಗೆ 4 ಮೀಟರ್ ಆಳ ಡ್ರೆಜ್ಜಿಂಗ್ ಮಾಡಬೇಕು. ಹೀಗಾಗಿ ಪ್ರತೀ ವರ್ಷ 4 ಮೀಟರ್‌ನಷ್ಟು ಡ್ರೆಜ್ಜಿಂಗ್ ಮಾಡಲಾಗುತ್ತದೆ. ಆದರೆ ನೀರಿನ ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತೀ ವರ್ಷವೂ ಸಮಸ್ಯೆ ಮುಂದುವರಿಯುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಈ ಬಾರಿ 7 ಮೀಟರ್‌ನಷ್ಟು ಆಳದಿಂದ ಹೂಳೆತ್ತಲು ನಿರ್ಧರಿಸಲಾಗಿದೆ. ಆಳ ಡ್ರೆಜ್ಜಿಂಗ್ ಉದ್ದೇಶ
ಮೀನುಗಾರಿಕಾ ಬೋಟ್‌ಗಳಿಗೆ ಅಳಿವೆಬಾಗಿಲಿನಲ್ಲಿ 3 ಮೀಟರ್ ಆಳಕ್ಕೆ ಡ್ರೆಜ್ಜಿಂಗ್ ಮಾಡಿದರೆ ಸಾಕಾಗುತ್ತದೆ. ಆದರೆ, ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್)ವಾಣಿಜ್ಯ ಬೋಟು, ಮಂಜಿಗಳಿಗೆ 4 ಮೀಟರ್ ಆಳ ಡ್ರೆಜ್ಜಿಂಗ್ ಮಾಡಬೇಕು. ಹೀಗಾಗಿ ಪ್ರತೀ ವರ್ಷ 4 ಮೀಟರ್‌ನಷ್ಟು ಡ್ರೆಜ್ಜಿಂಗ್ ಮಾಡಲಾಗುತ್ತದೆ. ಆದರೆ ನೀರಿನ ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತೀ ವರ್ಷವೂ ಸಮಸ್ಯೆ ಮುಂದುವರಿಯುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಈ ಬಾರಿ 7 ಮೀಟರ್‌ನಷ್ಟು ಆಳದಿಂದ ಹೂಳೆತ್ತಲು ನಿರ್ಧರಿಸಲಾಗಿದೆ. ವರ್ಷಾಂತ್ಯಕ್ಕೆ ಕಾಮಗಾರಿ ಆರಂಭದ ನಿರೀಕ್ಷೆ
ಅಳಿವೆಬಾಗಿಲಿನಲ್ಲಿ 29 ಕೋ.ರೂ.ವೆಚ್ಚದಲ್ಲಿ ಹೂಳೆತ್ತುವ ಮಹತ್ವದ ಯೋಜನೆಗೆ ಸರಕಾರದಿಂದ ಒಪ್ಪಿಗೆ ದೊರೆತು, ತಾಂತ್ರಿಕ ಮಂಜೂರಾತಿ ಪಡೆಯಲಾಗಿದೆ. ಶೀಘ್ರದಲ್ಲಿ ಪರಿಸರ ಅಧ್ಯಯನ, ಸಿಆರ್‌ಝಡ್ ಒಪ್ಪಿಗೆ ಪಡೆದು, ಜಾಗತಿಕ ಟೆಂಡರ್ ಕರೆದು ಈ ವರ್ಷಾಂತ್ಯದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
– ಪ್ರವೀಣ್ ಕುಮಾರ್, ಕಿರಿಯ ಅಭಿಯಂತರರು, ಬಂದರು ಇಲಾಖೆ -ದಿನೇಶ್ ಇರಾ