ದುಬಾೖ: ವಿದೇಶಗಳಿಂದ ತೀವ್ರ ವಿರೋಧದ ನಡು ವೆಯೂ ಗೂಢಚರ್ಯೆ ಆರೋಪದಲ್ಲಿ ಬ್ರಿಟಿಷ್- ಇರಾನಿಯನ್ ವ್ಯಕ್ತಿ ರೆಜಾ ಅಕ್ಬರಿ ಅವರನ್ನು ಇರಾನ್ ಗಲ್ಲಿಗೇರಿಸಿದೆ.
Advertisement
ಈ ಹಿಂದೆ ಇರಾನ್ ರಕ್ಷಣ ಸಚಿವಾಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಲಿ ರೆಜಾ ಅಕ್ಬರಿ ಅವರನ್ನು ಇರಾನ್ ಮರಣದಂಡನೆಗೆ ಗುರಿಪಡಿಸಿದೆ.
ಅಕ್ಬರಿ ಅವರು ಇರಾನ್ ಉನ್ನತ ಭದ್ರತಾ ಅಧಿಕಾರಿ ಅಲಿ ಶಮಖಾನಿ ಅವರ ಆಪ್ತರಾಗಿದ್ದರು. ಅಕ್ಬರಿ ಅವರನ್ನು ಗಲ್ಲಿಗೇರಿಸುವುದಕ್ಕೆ ಬ್ರಿಟನ್, ಅಮೆರಿಕ ತೀವ್ರ ಖಂಡನೆ ವ್ಯಕ್ತಪಡಿಸಿವೆ. “ಇದು ರಾಜಕೀಯ ಪ್ರೇರಿತ ಕೃತ್ಯ’ ಎಂದು ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ದೂರಿದ್ದಾರೆ.