ಬೀಜಿಂಗ್: ಕಳೆದೊಂದು ವರ್ಷದಿಂದ ನಾಪತ್ತೆಯಾಗಿದ್ದ ಚೀನದ ಖ್ಯಾತ ಉದ್ಯಮಿ, ಅಲಿಬಾಬಾ ಲಿಮಿಟೆಡ್‌ನ ಸ್ಥಾಪಕ ಜ್ಯಾಕ್ ಮಾ ಇದೀಗ ಮತ್ತೆ ಚೀನಗೆ ಮರಳಿದ್ದಾರೆಂದು ಮೂಲಗಳು ತಿಳಿಸಿವೆ.
ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಸರ್ಕಾರದೊಂದಿಗೆ ವೈಮನಸ್ಸು ಹೊಂದಿದ್ದ ಜ್ಯಾಕ್ ಮಾ, ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಜ್ಯಾಕ್ ಮಾ ಮೃತಪಟ್ಟಿರಬಹುದು ಎಂಬ ವದಂತಿಗಳೂ ಕೇಳಿಬಂದಿದ್ದವು.
ಅವೆಲ್ಲದರ ಬಳಿಕ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ಒಂದು ವರ್ಷದ ವರೆಗೆ ಜಪಾನ್‌ನಲ್ಲಿ ಹಾಗೂ ಹೊಸವರ್ಷದ ಬಳಿಕ ಸಿಂಗಾಪೂರ್ ಹಾಗೂ ಆಸ್ಟ್ರೇಲಿಯ ಪ್ರವಾಸದಲ್ಲಿ ಅವರು ನಿರತರಾಗಿದ್ದರು. ಅವರು ಬರುವ ಹೊತ್ತಿಗೇ ಅಲಿಬಾಬಾ ಸಂಸ್ಥೆಗಳ ಷೇರು ಮೌಲ್ಯವೂ ಏರಿದೆ.