Advertisement

ಕಪೂರ್‌ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್‌ –ಆಲಿಯಾ

01:04 PM Nov 06, 2022 | Team Udayavani |

ಮುಂಬಯಿ: ರಣ್ ಬೀರ್‌ ಕಪೂರ್‌ – ಆಲಿಯಾ ಭಟ್‌ ದಾಂಪತ್ಯ ಜೀವನದಲ್ಲಿ ಅತ್ಯಂತ ಸಂತಸದ ದಿನ ದಿನ ಬಂದಿದೆ. ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಪೂರ್‌ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ.

Advertisement

ಇಂದು ಬೆಳಗ್ಗೆ 7:30ಕ್ಕೆ ( ನ.6 ರಂದು ) ಹೆಚ್.ಎನ್.‌ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು – ಇಬ್ಬರು ಆರೋಗ್ಯವಾಗಿದ್ದು, ದಂಪತಿಗೆ ಎಲ್ಲೆಡೆಯಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಇದೇ ವರ್ಷದ ಜೂನ್‌ ನಲ್ಲಿ ಆಲಿಯಾ – ರಣ್ಬೀರ್‌ ತಮ್ಮ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು. ನಮ್ಮ ಮಗು ಶೀಘ್ರದಲ್ಲಿ ಬರಲಿದೆ ಎಂದು ಕ್ಯಾಪ್ಷನ್‌ ಬರೆದುಕೊಂಡು. ಆಸ್ಪತ್ರೆಯಲ್ಲಿದ್ದ ಫೋಟೋವನ್ನು ಹಂಚಿಕೊಂಡಿದ್ದರು.

2022 ರ ಏ.22 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇತ್ತೀಚೆಗೆ ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ 450 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next