Advertisement

ರಷ್ಯಾ ವಿಪಕ್ಷ ನಾಯಕ ನವಲ್ನಿಗೆ ವಿಷ ಪ್ರಾಶನ?

12:40 AM Aug 21, 2020 | mahesh |

ಮಾಸ್ಕೋ: ರಷ್ಯಾದ ವಿಪಕ್ಷ ರಷ್ಯಾ ಆಫ್ ದ ಫ್ಯೂಚರ್‌ನ ನಾಯಕ ಅಲೆಕ್ಸಿ ನವಲ್ನಿ (44) ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾದಲ್ಲಿದ್ದಾರೆ. ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರ ಪ್ರಬಲ ಟೀಕಾಕಾರರಾಗಿರುವ ಅವರಿಗೆ ವಿಷ ಉಣಿಸಿರುವ ಸಾಧ್ಯತೆ ಇದೆ ಎಂದು ಅವರ ವಕ್ತಾರೆ ಕಿರಾ ಯರ್ಮೈಶ್‌ ತಿಳಿಸಿದ್ದಾರೆ. ಅವರು ಸೈಬೀರಿಯಾದ ಒಮ್ಸ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

“ಸೈಬೀರಿಯಾದ ಟೋಮ್ಸ್‌ ನಿಂದ ಮಾಸ್ಕೋಗೆ ವಿಮಾನದಲ್ಲಿ ಬರುತ್ತಿದ್ದಾಗ ಏಕಾಏಕಿ ನವಲ್ನಿ ಅಸ್ವಸ್ಥಗೊಂಡರು. ಹೀಗಾಗಿ ವಿಮಾನವನ್ನು ಒಮಸ್ಕ್ನಲ್ಲಿ ತುರ್ತಾಗಿ ಇಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಹಾದ ಮೂಲಕ ವಿಷ ನೀಡಿರುವ ಸಾಧ್ಯತೆ ಇದೆ’ ಎಂದು ಕಿರಾ ಟ್ವೀಟ್‌ ಮಾಡಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜತೆಗೆ ಮಾತನಾಡಿ ಅಲೆಕ್ಸಿ ನವಲ್ನಿ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅಂಶ ಇದುವರೆಗೆ ದೃಢಪಟ್ಟಿಲ್ಲ ಎಂದಿದ್ದಾರೆ. ಅಲೆಕ್ಸಿ ನವಲ್ನಿ ಅಧ್ಯಕ್ಷ ವ್ಲಾದಿ ಮಿರ್‌ ಪುಟಿನ್‌ ನೇತೃತ್ವದ ಯುನೈಟೆಡ್‌ ರಷ್ಯಾ ಪಕ್ಷ ಕಳ್ಳರು ಮತ್ತು ವಂಚರ ಪಕ್ಷವೆಂದು ದೂರಿ, ಭ್ರಷ್ಟಾಚಾರದ ಆರೋಪ ಮಾಡಿದ್ದರು. 2011ರಲ್ಲಿ ಅವರನ್ನು ಬಂಧಿಸಿ 15 ದಿನಗಳ ಕಾಲ ಕಾರಾಗೃಹದಲ್ಲಿ ಇರಿಸಲಾಗಿತ್ತು. 2013ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next