Advertisement

ತವಾಂಗ್‌ನಲ್ಲಿ ಐಟಿಬಿಪಿ ಕಟ್ಟೆಚ್ಚರ

11:54 PM Dec 26, 2020 | mahesh |

ತವಾಂಗ್‌: ಪೂರ್ವ ಲಡಾಖ್‌ನಲ್ಲಿ ಪೀಪಲ್ಸ್‌ ಲಿಬರೇಶನ್‌ ಆರ್ಮಿ ದುಸ್ಸಾಹಸಕ್ಕೆ ಯತ್ನಿಸಿದಂತೆ, ಅರುಣಾಚಲ ಪ್ರದೇಶದ ತವಾಂಗ್‌ನ ಎಲ್‌ಎಸಿಯಲ್ಲಿ ಅಂಥ ಯಾವುದೇ ಅಚ್ಚರಿ ನೀಡಲು ಚೀನಕ್ಕೆ ಕಿಂಚಿತ್ತೂ ಅವಕಾಶ ನೀಡುವುದಿಲ್ಲ ಎಂದು ಐಟಿಬಿಪಿ ದಿಟ್ಟ ಸವಾಲೆಸೆದಿದೆ.

Advertisement

ತವಾಂಗ್‌ನ ಗ್ರೌಂಡ್‌ ಝೀರೋಗೆ ಭೇಟಿ ನೀಡಿದ “ಎಎನ್‌ಐ’ ವರದಿಗಾರರ ತಂಡ, ಎಲ್‌ಎಸಿಯ ವಸ್ತುಚಿತ್ರಣ ಮುಂದಿಟ್ಟಿದೆ. “ಇಂಡೋ- ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಇಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಿದೆ. ನಮ್ಮ ರಕ್ಷಣ ವ್ಯವಸ್ಥೆ ಮೀರಿ ಚೀನ ದಾಳಿ ನಡೆಸಲು ಸಾಧ್ಯವೇ ಇಲ್ಲ’ ಎಂದು ಐಟಿ ಬಿಪಿಯ 55ನೇ ಬೆಟಾಲಿಯನ್‌ ಕಮಾಂಡರ್‌ ಕಮಾಂಡೆಂಟ್‌ ಐ.ಬಿ. ಝಾ “ಎಎನ್‌ಐ’ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಣ್ಣಲ್ಲಿ ಕಣ್ಣಿಟ್ಟಿದ್ದೇವೆ!: “ಗಡಿಯ ಪ್ರತಿ ಪ್ರದೇಶವನ್ನೂ ಇಲ್ಲಿ ಐಟಿಬಿಪಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದೆ. ಯಾರೂ ನಮಗೆ ಅಚ್ಚರಿ ನೀಡಲಾರರು. ರಾಷ್ಟ್ರ ರಕ್ಷ ಣೆಗೆ ನಾವು ಸದಾ ಸಿದ್ಧರಿದ್ದೇವೆ. ಲಡಾಖ್‌ನಲ್ಲಿ ನಮ್ಮ ಪಡೆ ಕೆಚ್ಚೆದೆಯ ಸಾಹಸ ಪ್ರದರ್ಶಿಸಿದೆ. ಯಾವುದೇ ಪ್ರದೇಶದ ಹೊಣೆ ನಮಗೆ ವಹಿಸಿ ದರೂ ಅದನ್ನು ಹಿಂದಿಗಿಂತ ಯಶಸ್ವಿಯಾಗಿ ಕಾಪಾಡುತ್ತೇವೆ’ ಎಂದಿದ್ದಾರೆ. ಲಡಾಖ್‌ನ ಎಲ್‌ಎಸಿಯ ಪ್ಯಾಂಗಾಂಗ್‌ ಸೊ, ಫಿಂಗರ್‌ ಏರಿಯಾ, ಪಿಪಿ-14, 15, 16, 17ಎಗಳಲ್ಲಿ ಐಟಿಬಿಪಿಯ ಗಸ್ತು ಚೀನದ ಎದೆ ನಡುಗಿಸಿತ್ತು. ಎಲ್‌ಎಸಿ ರಕ್ಷಣೆ ಸಂಬಂಧ ಐಟಿಬಿಪಿ, ಭಾರತೀಯ ಸೇನೆಗೆ ಪ್ರತಿಕ್ಷಣದ ಮಾಹಿತಿ ರವಾನಿಸುತ್ತಿದೆ.

ಹೇಡಿ ಪಾಕ್‌ಗೆ ಚೀನದ 50 ಡ್ರೋನ್‌!
ದುಷ್ಟ ಚೀನ ಈಗ ಹೇಡಿ ಪಾಕಿಸ್ಥಾನಕ್ಕೆ ಇನ್ನಷ್ಟು ಶಸ್ತ್ರಾಸ್ತ್ರ ಬಲ ತುಂಬಲು ಮುಂದಾಗಿದೆ. 50 “ವಿಂಗ್‌ ಲೂಂಗ್‌ 2′ ಶಸ್ತ್ರಾಸ್ತ್ರ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ಪೂರೈಸಲು ಬೀಜಿಂಗ್‌ ನಿರ್ಧರಿಸಿರುವ ಬಗ್ಗೆ “ಗ್ಲೋಬಲ್‌ ಟೈಮ್ಸ್‌’ ಕೊಚ್ಚಿಕೊಂಡಿದೆ. ಲಿಬಿಯಾ, ಸಿರಿಯಾ, ಅಜರ್‌ಬೈಜಾನ್‌ ಬಿಕ್ಕಟ್ಟಿನಲ್ಲಿ ಈ ಡ್ರೋನ್‌ಗಳು ನಿರ್ಣಾಯಕ ಪಾತ್ರ ವಹಿಸಿದ್ದವು. “ಹೊಸಪೀಳಿಗೆಯ ಶಸ್ತ್ರಾಸ್ತ್ರಗಳನ್ನು ಎದುರಿಸಲು ಭಾರತ ಸೇನೆಗೆ ಸಾಧ್ಯವಿಲ್ಲ’ ಎನ್ನುವ ಭ್ರಮೆಯನ್ನೂ ಚೀನ ವ್ಯಕ್ತಪಡಿಸಿದೆ.

ಹಿಮಗಾಳಿ ಲೆಕ್ಕಿಸದ ಐಟಿಬಿಪಿ
ತವಾಂಗ್‌ ಗಸ್ತು ತಾಣಗಳಲ್ಲಿ ಗಂಟೆಗೆ 74 - 92 ಕಿ.ಮೀ. ವೇಗದಲ್ಲಿ ಹಿಮಗಾಳಿ ಬೀಸುತ್ತಿದೆ. ಘನೀಕರಿಸುವ ತಾಪಮಾನದ ಬೆಟ್ಟಗಳಲ್ಲಿ ಸ್ನೋ ಸೂಟ್ಸ್‌ ಧರಿಸಿ ಐಟಿಬಿಪಿ ಗಸ್ತು ನಡೆಸುತ್ತಿದೆ. ಯಾಕ್‌ ಮೃಗಗಳನ್ನು ಐಟಿಬಿಪಿ ಬಳಸಿಕೊಳ್ಳುತ್ತಿದೆ. ಇವು 90 ಕಿಲೋ ತೂಕದ ಸರಕುಗಳನ್ನು ದುರ್ಗಮ ತಾಣಗಳಿಗೆ ಅತ್ಯಲ್ಪ ಕಾಲದಲ್ಲಿ ತಲುಪಿಸಬಲ್ಲವು.

Advertisement
Advertisement

Udayavani is now on Telegram. Click here to join our channel and stay updated with the latest news.

Next