Advertisement

ಪ್ರಾಕೃತಿಕ ವಿಕೋಪ ಎದುರಿಸಲು ಅಲರ್ಟ್‌ ಆಗಿರಿ

11:26 AM May 24, 2018 | Team Udayavani |

ಪುತ್ತೂರು: ತಡೆಗಟ್ಟಲು ಅಸಾಧ್ಯವಾದ ಪ್ರಾಕೃತಿಕ ವಿಕೋಪಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಹಾಗೂ ತಡೆಗಟ್ಟಲು ಸಾಧ್ಯವಾಗುವ ವಿಕೋಪಗಳ ಬಗ್ಗೆ ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಅಲರ್ಟ್‌ ಆಗಿರಬೇಕು. ಪ್ರಾಕೃತಿಕ ವಿಕೋಪ ದಂತಹ ಘಟನೆ ಸಂಭವಿಸಿದಾಗ ತಮ್ಮ ಇಲಾಖೆಯ
ಕೆಲಸ ಅಲ್ಲ ಎಂದು ದೂರ ನಿಲ್ಲಬೇಡಿ ಎಂದು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಸೂಚನೆ ನೀಡಿದರು.

Advertisement

ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾಕೃತಿಕ ವಿಕೋಪ
ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು.

ಜೂನ್‌ 6ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ಮಾಹಿತಿ ಇದೆ. ಈ ಹೊತ್ತಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಜ್ಜಾಗಬೇಕು. ತಡೆಗಟ್ಟ ಬಹುದಾದ ಕ್ರಮ ಹಾಗೂ ತಡೆಗಟ್ಟಲು ಅಸಾಧ್ಯವಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿ ಕೊಳ್ಳಬೇಕು. ಪ್ರಾಕೃತಿಕ ವಿಕೋಪದಿಂದ ಜೀವ ಹಾನಿ ಸಂಭವಿಸಿದ 48 ಗಂಟೆಯೊಳಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಳೆ ಬಾರದಿದ್ದರೂ ಸಮಸ್ಯೆಯೇ ಈ ನಿಟ್ಟಿನಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಗಮನ ಹರಿಸಬೇಕು. ಮಳೆ ಬಾರದೇ ಜನ ಕಂಗೆಡುವಂತಾಗಬಾರದು. ಕಾಲಕಾಲಕ್ಕೆ ಸಮರ್ಪಕ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು. ಮಳೆಗಾಲದ ಸಂದರ್ಭ ಸುಖಾಸುಮ್ಮನೆ ರಜಾ ತೆಗೆದುಕೊಳ್ಳಲು ಅವಕಾಶವಿಲ್ಲ. ಒಂದು ವೇಳೆ ಅನಿವಾರ್ಯ ರಜೆ
ಬೇಕಾದಲ್ಲಿ ಪರ್ಯಾಯ ವ್ಯಕ್ತಿಯನ್ನು ಆ ಹುದ್ದೆಗೆ ನೇಮಿಸಬೇಕು. ಸಾರ್ವಜನಿಕರು ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ಸ್ಪಂದಿಸಬೇಕು. ಕೆಲ ಸಂದರ್ಭ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಮಾಹಿತಿ ತಿಳಿಸಿ. ನಮ್ಮ ಇಲಾಖೆ ಅಲ್ಲ ಎಂಬ ಕಾರಣಕ್ಕೆ, ಕರೆ ಸ್ವೀಕರಿಸಿದೇ ಇರಬೇಡಿ ಎಂದು ಕಿವಿಮಾತು ಹೇಳಿದರು.

ಸೇತುವೆ ಬಳಿ ಶೆಡ್‌ ಹಾಕಿ
ಚೆಲ್ಯಡ್ಕ, ಹೊಸ್ಮಠ, ಬಿಳಿನೆಲೆ ಮೊದಲಾದ ಮುಳುಗು ಸೇತುವೆಗಳ ಇಕ್ಕೆಲಗಳಲ್ಲಿ ಸಣ್ಣ ಶೆಡ್‌ ಹಾಕಬೇಕು. ತುರ್ತು ಸಂದರ್ಭ ಇಲ್ಲಿ ಒಬ್ಬ ಅಧಿಕಾರಿ ಅಥವಾ ಸಿಬಂದಿಯನ್ನು ನೇಮಕ ಮಾಡಬೇಕು. ಸೇತುವೆ ಮೇಲೆ ನೀರು ಬಂದಾಗ ಯಾವುದೇ ವಾಹನವನ್ನು ದಾಟಲು ಬಿಡಬಾರದು. ಈ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯವೂ ಮಾಡಬಾರದು ಎಂದು
ಎಚ್ಚರಿಕೆ ನೀಡಿದರು.

Advertisement

ಮುಕ್ವೆ, ಕಬಕ ಮೊದಲಾದ ಸೇತುವೆಗಳ ಬಳಿ ತ್ಯಾಜ್ಯ ಎಸೆಯುವ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ಈ ಬಗ್ಗೆ ಪಿಡಿಒಗೆ ಸೂಚನೆ ನೀಡಿದ ಎಸಿ, ಸಾಮಾನ್ಯವಾಗಿ ವಾಹನದಲ್ಲಿ ಹೋಗು ವಾಗಲೇ ತ್ಯಾಜ್ಯವನ್ನು ಎಸೆದು ಹೋಗು ತ್ತಾರೆ. ಇದನ್ನು ತಡೆಗಟ್ಟುವುದು ಕಷ್ಟವೇ ಸರಿ. ಆದರೆ ಪೊಲೀಸ್‌ ಇಲಾಖೆ ನೈಟ್‌ ಬೀಟ್‌ ವೇಳೆ ಇದರ ಬಗ್ಗೆ ಗಮನ ಹರಿಸಬೇಕು. ಹೊಟೇಲ್‌ಗ‌ಳ ಮೇಲೆ ಒಂದು ಕಣ್ಣಿಡಿ. ಒಂದಿಬ್ಬರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆಗ ಉಳಿದವರಿಗೆ ಪಾಠ ಆಗುತ್ತದೆ. ಸಹಜವಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು ತಪ್ಪುತ್ತದೆ ಎಂದರು.

ಮಿಂಚು ಪ್ರತಿಬಂಧಕ
ಕೆಯ್ಯೂರು ಹಾಗೂ ನೆಲ್ಯಾಡಿಯಲ್ಲಿ ಮಿಂಚು ಪ್ರತಿಬಂಧಕ ಅಳವಡಿಸಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಗಮನ ಸೆಳೆಯಲಾಯಿತು. ಇದರ ಬಗ್ಗೆ ಮಾಹಿತಿ ನೀಡಿದ ಎಚ್‌.ಕೆ. ಕೃಷ್ಣಮೂರ್ತಿ, ಜಿಲ್ಲೆಯ 13 ಕಡೆ ಮಿಂಚು ಪ್ರತಿಬಂಧಕ ಅಳವಡಿಸಲು ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

ಕಂಟ್ರೊಲ್‌ ರೂಂ
ಮಳೆಗಾಲದ ವಿಪತ್ತು ಬಗ್ಗೆ ಸಾರ್ವಜನಿಕರು ಕರೆ ಮಾಡಿ, ಮಾಹಿತಿ ನೀಡಬಹುದು. ಅಥವಾ ತುರ್ತು ಸಂದರ್ಭ
ಸಹಾಯಕ್ಕೆ ಕರೆಯಬಹುದು. ಮೆಸ್ಕಾಂನ ಕಸ್ಟಮರ್‌ ಕೇರ್‌ ನಂಬರ್‌ 1912 ಹಾಗೂ ಕಂದಾಯ ಇಲಾಖೆಯ ಕಸ್ಟಮರ್‌ ಕೇರ್‌ ನಂಬರ್‌ 08251- 230349.

Advertisement

Udayavani is now on Telegram. Click here to join our channel and stay updated with the latest news.

Next