Advertisement

ಭಿಲ್‌ ಮೂಲಕವೇ ಪೊಲೀಸರಿಗೆ ಎಚ್ಚರಿಕೆ

03:16 PM Aug 29, 2021 | Team Udayavani |

ಬೆಂಗಳೂರು: ಗ್ರಾಮಕ್ಕೆ ಪೊಲೀಸರಿಗೆ ನೋ ಎಂಟ್ರಿ, ಆರೋಪಿಗಳನ್ನು ಬಂಧಿಸಲು ಗ್ರಾಮಕ್ಕೆ ಹೋದರೆ ಬಾಣ, ಕಲ್ಲುಗಳ ಮೂಲಕವೇ ಹೆದರಿಸಿ ಹೆಮ್ಮೆಟ್ಟಿಸುತ್ತಾರೆ. ಈ ಗ್ಯಾಂಗ್‌ನ ಕೃತ್ಯದ ಮಾದರಿ ಯಾವುದೇ ಸಿನಿಮಾಗೂ ಕಡಿಮೆ ಇಲ್ಲ. ಮಧ್ಯಪ್ರದೇಶದ ಥಾರ್‌ ಜಿಲ್ಲೆಯ ಭಗೋಲಿ ಎಂಬ
ಗ್ರಾಮದ ಬುಡಕಟ್ಟು ಸಮುದಾಯವಾದ “ಭಿಲ್‌’ ಮೋಸ್ಟ್‌ ಡೇಂಜರಸ್‌ ಗ್ಯಾಂಗ್‌.

Advertisement

ಸ್ಥಳೀಯ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಮುದಾಯದ ಬಹುತೇಕ ಕುಟುಂಬಗಳ ಮುಖ್ಯ ಕಸುಬು “ದರೋಡೆ, ಡಕಾಯಿತಿ, ಮನೆಕಳವು. ಪೊಲೀಸರ ಕಂಡರೆ ಹೆದರದೆ ಅವರನ್ನೆ ಹಿಮ್ಮೆಟ್ಟಿಸುವ ಕಲೆಕರಗತ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಕಲ್ಲು-ಬಾಣಗಳ ಬಿಡು ವುದರಲ್ಲಿ ಪರಿಣಿತರಾಗಿದ್ದಾರೆ. ಕಲ್ಲುಗಳಿಗೆ ದಾರ ಕಟ್ಟಿಕೊಂಡು ಎದುರಾಳಿ ಕಡೆಗೆಕಲ್ಲು ಎಸೆಯುತ್ತಾರೆ. ಯಾವುದೇ ಕಾರಣಕ್ಕೂ ಅವರ ಗುರಿ ತಪ್ಪುವುದಿಲ್ಲ. ಬಾಣವನ್ನೂ ಅಷ್ಟೇ ಸ್ಪಷ್ಟವಾಗಿ ಬಿಡುತ್ತಾರೆ. ಒಂದು ಕ್ಷಣ ಮೈಮರೆತರೆ ಎದುರಾಳಿಯ ಎದೆ ಸೀಳುವುದು ಗ್ಯಾರಂಟಿ.

ಕೃತ್ಯ ಹೇಗೆ?: ಭಿಲ್‌ ಸಮುದಾಯದ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ಬೆಂಗಳೂರು ಸೇರಿ ನೆರೆ ರಾಜ್ಯಗಳಿಗೆ ರೈಲು, ಬಸ್‌ಗಳ ಮೂಲಕ ಟಿಕೆಟ್‌ ಕಾಯ್ದಿರಿಸಿ ಹೋಗಿ ಅಲ್ಲಿನ ರೈಲ್ವೆ, ಬಸ್‌ ನಿಲ್ದಾಣಗಳು, ಪಾಳುಬಿದ್ದ ಕಟ್ಟಡಗಳು ಹಾಗೂ ನಿರ್ಜನ ಪ್ರದೇಶದಲ್ಲಿ ತಿಂಗಳುಗಟ್ಟಲೇ ತಂಗುತ್ತಾರೆ. ಬಳಿಕ ರೈಲ್ವೆ ಹಳಿಗಳ ಪಕ್ಕ ಹಾಗೂ ನಗರದ ಪ್ರಮುಖ ಲೇಔಟ್‌ಗಳಲ್ಲಿ ಬೆಳಗ್ಗೆ ವೇಳೆ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಾರೆ. ರಾತ್ರಿ ವೇಳೆ ಆ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿ ಅಂದೇ ತಮ್ಮ ಊರಿಗೆ ಪರಾರಿಯಾಗುತ್ತಿದ್ದರು. ಕೆಲವೊಮ್ಮೆ ಒಂಟಿಯಾಗಿ ಓಡಾಡುವವರು, ಒಂಟಿ ಮನೆಗಳ ಮೇಲೂ ದಾಳಿ ನಡೆಸಿ ದರೋಡೆ, ಡಕಾಯಿತಿ ನಡೆಸುತ್ತಾರೆ. ಅಗತ್ಯ ಬಿದ್ದರೆ ಕೊಲೆಗೈಯಲು ಹಿಂಜರಿಯುವುದಿಲ್ಲ ಈ ಗ್ಯಾಂಗ್‌.

ಇದನ್ನೂ ಓದಿ:ತಾಲಿಬಾನ್ ಹೊಸ ನಿಯಮ: ಸಂಗೀತ, ಟಿವಿ-ರೇಡಿಯೋಗಳಲ್ಲಿ ಮಹಿಳೆಯರ ಧ್ವನಿಗೂ ಇಲ್ಲ ಅವಕಾಶ!

ಪೊಲೀಸರಿಗೆ ನೋ ಎಂಟ್ರಿ!
ನೆರೆ ರಾಜ್ಯಗಳಲ್ಲಿ ಕುಕೃತ್ಯ ಎಸಗುವ ಆರೋಪಿಗಳು ತಮ್ಮ ಊರಿಗೆ ಹೋಗಿ ತಲೆಮರೆಸಿಕೊಳ್ಳುತ್ತಾರೆ. ಭಗೋಲಿ ಗ್ರಾಮಕ್ಕೆ ಪೊಲೀಸರಿಗೆ ನೋ ಎಂಟ್ರಿ. ಒಂದು ವೇಳೆ ಎಂಟ್ರಿ ಕೊಟ್ಟರೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಇಡೀ ಗ್ರಾಮಸ್ಥರು ಮುಗಿಬೀಳುತ್ತಾರೆ. ಬಿಲ್ಲು- ಬಾಣ, ಕಲ್ಲುಗಳಿಂದ ಹಲ್ಲೆ ನಡೆಸುತ್ತಾರೆ. ಹೀಗಾಗಿ ಇಲ್ಲಿಗೆ ಸ್ಥಳೀಯ ಪೊಲೀಸರೂ ಹೋಗಲು ಹೆದರುತ್ತಾರೆ. ಇದೇ ತಂಡ 2018ರಲ್ಲಿ ರಾತ್ರಿ ವೇಳೆ ಗಸ್ತಿನಲ್ಲಿದ್ದ ಕೋಡಿಗೇಹಳ್ಳಿ ಪೊಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿ ಮೇಲೆಕಲ್ಲು ತೂರಾಟ ನಡೆಸಿ ಪೊಲೀಸ್‌”303 ರೈಫ‌ಲ್‌’ ಕದೊಯ್ದಿದ್ದರು. ಅನಂತರಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಅಲ್ಲದೆ, ಭಗೋಲಿ ಗ್ರಾಮದಲ್ಲಿ ಚಿನ್ನಾಭರಣ ವಶಕ್ಕೆ ಪಡೆಯುವಾಗ ಪೊಲೀಸರ ಮೇಲೆ ಕಲ್ಲು ತೂರಾಟ, ಬಾಣಗಳ ಮೂಲಕಹೆದರಿಸಿದ್ದರು. ಅದರಿಂದ ಸ್ಥಳೀಯ ಪಿಎಸ್‌ಐ ಒಬ್ಬರಿಗೆ ಗಾಯವಾಗಿತ್ತು. ಇದೀಗ ಈ ಗ್ಯಾಂಗ್‌ನಕೆಲ ಸದಸ್ಯರ ಹಾವಳಿ ಕಡಿಮೆಯಾಗಿದ್ದರೂ, ಬೆಂಗಳೂರಿನ ಗಡಿ ಭಾಗ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಗಾಗ್ಗೆ ದರೋಡೆ ಎಸಗಿ ಪರಾರಿಯಾಗುತ್ತದೆ.

Advertisement

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next