ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೊಷಿಸಲಾಗಿದ್ದು, ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ಬಿಸಿಲು ಮತ್ತು ಉರಿಸೆಕೆಯಿಂದ ಕೂಡಿತ್ತು. ಮಂಗಳೂರು ನಗರದಲ್ಲಿ ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು.
ಬೆಳ್ತಂಗಡಿ: ಕೆಲವೆಡೆ ಹನಿ ಮಳೆ
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಶನಿವಾರ ಅಲ್ಲಲ್ಲಿ ಹನಿ ಮಳೆಯಾಗಿದೆ. ಮುಂಡಾಜೆ, ಸೋಮಂತಡ್ಕ, ಚಾರ್ಮಾಡಿ, ದಿಡುಪೆ ಸಹಿತ ಕೆಲವೆಡೆ ಹನಿ ಮಳೆ ಬಿದ್ದಿದೆ. ಮುಂಜಾನೆಯಿಂದ ಮೋಡ ಸಹಿತ ಬಿಸಿಲಿನಿಂದ ಕೂಡಿದ ವಾತಾವರಣ ಕಂಡುಬಂದಿದೆ.
ಮಂಗಳೂರಿನಲ್ಲಿ 33.8 ಡಿ.ಸೆ. ಗರಿಷ್ಠ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
Related Articles