Advertisement

ಭಾರತೀಯ ರಕ್ಷಣಾ ಸೌಕರ್ಯಗಳ ಮೇಲೆ ಚೀನ ರಹಸ್ಯ ಸೇನೆಯ ಸೈಬರ್‌ ದಾಳಿ ?

03:51 PM Nov 08, 2018 | Team Udayavani |

ಹೊಸದಿಲ್ಲಿ : ಚೀನದ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಇದರ ರಹಸ್ಯ ಸೇನಾ ಘಟಕ ಸಂಖ್ಯೆ 61398, ಭಾರತದ ಅತ್ಯಂತ ಪ್ರಮುಖ ಹಾಗೂ ಮಹತ್ವದ ರಕ್ಷಣಾ ಸೌಕರ್ಯಗಳ ಮೇಲೆ ಸೈಬರ್‌ ಸಮರ ಹೂಡುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ದಳ ಎಚ್ಚರಿಸಿದೆ.

Advertisement

ಚೀನದ ಈ ರಹಸ್ಯ ಸೇನಾ ದಳವು ಸೈಬರ್‌ ಸಮರಕ್ಕೆ ಕುಪ್ರಸಿದ್ಧವಾಗಿದ್ದು ಅದರ ಕಾಕದೃಷ್ಟಿಗೆ ಈಗ ಭಾರತದ ಸೇನಾ ಸೌಕರ್ಯಗಳು ಗುರಿಯಾಗಿರುವುದಾಗಿ ಗುಪ್ತಚರ ದಳ ಮಾಹಿತಿ ನೀಡಿದೆ. 

ಭಾರತೀಯ ಗುಪ್ತಚರ ದಳವು ಚೀನ ಸೇನೆಯ ರಹಸ್ಯ ಘಟಕದ ಈ ಹುನ್ನಾರವನ್ನು ಸೈಬರ್‌ ಸ್ಪೇಸ್‌, ಇಂಟರ್‌ ಸೆಪ್‌ಶನ್‌ ಮತ್ತು ವಿಶ್ವಾದ್ಯಂತದ ಡಿಜಿಟಲ್‌ ಕಮ್ಯುನಿಕೇಶನ್‌ ಸಂಕೇತಗಳನ್ನು ಬಿಡಿಸುವ ಮೂಲಕ ಬಯಲಿಗೆಳೆದಿದೆ ಎಂದು ವರದಿಗಳು ತಿಳಿಸಿವೆ.

ಚೀನದ ರಹಸ್ಯ ಸೇನಾ ಘಟಕವು ಭಾರತೀಯ ಸೇನಾ ಸೌಕರ್ಯಗಳ ಮೇಲೆ ಸೈಬರ್‌ ಸಮರ ಎಸಗುವುದಕ್ಕಾಗಿ ಐಸ್‌ ಬ್ಯಾಗ್‌, ಹಿಡನ್‌ ಲೈನಕ್ಸ್‌ ಮತ್ತು ಎಪಿಟಿ  ಮಾತ್ರವಲ್ಲದೆ, ವಿಭಿನ್ನ ಬಗೆಯ ಟ್ರೋಜಾನ್‌ ಮಾಲ್‌-ವೇರ್‌ಗಳನ್ನು ಬಳಸಿಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ಗುಪ್ತಚರ ದಳ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next