Advertisement

Alert: ವಿವಸ್ತ್ರಗೊಳಿಸುವ ಆ್ಯಪ್‌ಸಂಖ್ಯೆ ಹೆಚ್ಚಳ- ಆತಂಕ

12:28 AM Dec 10, 2023 | Team Udayavani |

ವಾಷಿಂಗ್ಟನ್‌: ಫೋಟೋಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸುವ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಜನಪ್ರಿಯತೆ ಪಡೆಯುತ್ತಿವೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ನೆಟ್‌ವರ್ಕ್‌ ಅನಾಲಿಸಿಸ್‌ ಕಂಪನಿ “ಗ್ರಾಫಿಕಾ’ದ ಸಂಶೋಧನೆ ಪ್ರಕಾರ, ಸೆಪ್ಟೆಂಬರ್‌ ತಿಂಗಳೊಂದರಲ್ಲೇ 2.4 ಕೋಟಿ ಮಂದಿ ಇಂಥ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ.

Advertisement

ಮಹಿಳೆಯರ ಫೋಟೋಗಳನ್ನು ಬಳಸಿಕೊಂಡು ವಿವಸ್ತ್ರವಾದಂತೆ ಬಿಂಬಿಸುವ ಈ ಸೇವೆಯು ಮಾರ್ಕೆಟಿಂಗ್‌ ಸಲುವಾಗಿ ಜನಪ್ರಿಯ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊ ಳ್ಳುತ್ತಿವೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಸ್ತ್ರಗೊಳಿಸುವ ಆ್ಯಪ್‌ಗಳ ಜಾಹೀ ರಾತುಗಳ ಲಿಂಕ್‌ಗಳು 2,400 ಪಟ್ಟು ಹೆಚ್ಚಳವಾಗಿದೆ ಎಂದು ಗ್ರಾಫಿಕಾ ತಿಳಿಸಿದೆ. ಡೀಪ್‌ ಫೇಕ್‌ ಪೊರ್ನೋಗ್ರಫಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next