Advertisement
ವಂಚಕರು ಎಸ್ ಎಮ್ ಎಸ್ ಹಾಗೂ ಕರೆಗಳ ಮೂಲಕ ಬ್ಯಾಂಕಿನ ಗ್ರಾಹಕರನ್ನು ವಂಚಿಸಲು ನೋಡುತ್ತಿದ್ದಾರೆ ಎಂದು ಎಸ್ ಬಿ ಐ ಗೆ ಮಾಹಿತಿ ದೊರಕಿರುವ ಕಾರಣದಿಂದಾಗಿ ಈ ರೀತಿಯ ವಂಚಕರ ವಂಚನೆಗೆ ಬಲಿಯಾಗಬೇಡಿ ಎಂದು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
Related Articles
Advertisement
ಇನ್ನು, ಈ ಪ್ರಕರಣಗಳ ಬಗ್ಗೆ ಎಸ್ ಬಿ ಐ ಪರಿಶೀಲನೆ ಮಾಡುತ್ತಿದೆ. ಗ್ರಾಹಕರು ಎಸ್ ಬಿ ಐ ಬ್ಯಾಂಕ್ ನ ಅಧಿಕೃತವಲ್ಲದ ಎಸ್ ಎಮ್ ಎಸ್ ಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದೆ.
ಅಧಿಕೃತವಲ್ಲದ ಯಾವುದೇ ಎಸ್ ಎಮ್ ಎಸ್ ಲಿಂಕ್ ಓಪನ್ ಮಾಡುವುದು ಅಥವಾ ಕರೆಗಳನ್ನು ಸ್ವೀಕರಿಸಬಾರದು ಎಂದು ಎಸ್ ಬಿ ಐ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಇನ್ನು, ರಿವಾರ್ಡ್ ಪಾಯಿಂಟ್ ನ ಹೆಸರಿನಲ್ಲಿ, ಎಸ್ ಬಿ ಐ ಗ್ರಾಹಕರಿಗೆ ಫೋನ್ ಮತ್ತು ಎಸ್ ಎಮ್ ಎಸ್ ಗಳನ್ನೂ ಮಾಡುತ್ತಿರುವ ಅಂಶ ಬೆಳೆಕಿಗೆ ಬಂದಿದೆ ಎಂದು ಬ್ಯಾಂಕ್ ಹೇಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ಎಟಿಎಂ ಪಿನ್, ಓಟಿಪಿ ಅನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಕೇವಲ ಐದು ನಿಮಿಷಗಳಲ್ಲಿ ಎರಡು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು, ಭರ್ಜರಿ ಆಫರ್ ನಿಮಗೆ ನೀಡಲಾಗುತ್ತಿದೆ. ಹೀಗೆ ಹತ್ತು ಹಲವಾರು ಮರಳು ಮಾಡುವ ಮೆಸೇಜ್ ಗಳು ಗ್ರಾಹಕರ ಮೊಬೈಲ್ ನಂಬರ್ ಗೆ ಬಂದಿರುವುದು ಬೆಳಕಿಗೆ ಬಂದಿದೆ. ಅಂತಹ ಮೆಸೇಜ್ ಗಳನ್ನೂ ಬ್ಯಾಂಕ್ ಕಳುಹಿಸುವುದಿಲ್ಲ. ಹಾಗಾಗಿ ಆ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ.
ಅಲ್ಲದೆ, ಬ್ಯಾಂಕ್ ಸಿಬ್ಬಂದಿ ಎಂದು ಕಳುಹಿಸುವ ಇ ಮೇಲ್ ಅಥವಾ ಮೆಸೇಜ್ ಗಳಿಗೂ ಉತ್ತರಿಸದಂತೆ ಬ್ಯಾಂಕ್ ಟ್ವೀಟರ್ ನಲ್ಲಿ ಮನವಿ ಮಾಡಿಕೊಂಡಿದೆ. ಬ್ಯಾಂಕ್ ಯಾವುದೇ ಕಾರಣಕ್ಕೂ ತನ್ನ ಗ್ರಾಹಕರಿಗೆ ಇಂತಹ ಮೆಸೇಜ್ ಅಥವಾ ಇ ಮೇಲ್ ಕಳುಹಿಸುವುದಿಲ್ಲ ಎಂದು ಎಸ್ ಬಿ ಐ ಸ್ಪಷ್ಟಪಡಿಸಿದೆ.
ಇನ್ನು, ಉದ್ಯೋಗ ಸಂಬಂಧಿ ಜಾಹೀರಾತುಗಳಿದ್ದಲ್ಲಿ ಆ ಬಗ್ಗೆ ಬ್ಯಾಂಕಿನ ಅಧಿಕೃಥ ವೆಬ್ ಸೈಟ್ ಮೂಲಕ ಮಾಹಿತಿ ಪಡೆಯಿರಿ ಎಂದು ಬ್ಯಾಂಕ್ ತಿಳಿಸಿದೆ.
ಓದಿ : ಪಾನ್, ಆಧಾರ್ ಕಾರ್ಡ್ ಲಿಂಕ್ ಮಾಡಿ. ಇಲ್ಲವಾದರೇ ದಂಡ ಖಚಿತ.! ಲಿಂಕ್ ಮಾಡುವುದು ಹೇಗೆ.?