Advertisement

ಒತ್ತುವರಿಯಾಗಿದ್ದ ಕೆರೆ ಜಾಗ ತೆರವು

12:53 PM Jun 04, 2020 | Naveen |

ಆಲ್ದೂರು: ವಸ್ತಾರೆ ಗ್ರಾಪಂ ವ್ಯಾಪ್ತಿಯಲ್ಲಿರುವ ಅಮ್ಮನವರ ಕೆರೆ ಜಾಗ ಒತ್ತುವರಿಯಾಗಿದ್ದು ಬುಧವಾರ ಒತ್ತುವರಿಯಾಗಿದ್ದ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಗಿದೆ.

Advertisement

ವಸ್ತಾರೆ ಗ್ರಾಮದಲ್ಲಿರುವ ಅಮ್ಮನವರ ಕೆರೆ ಇತಿಹಾಸ ಪ್ರಸಿದ್ಧ ಕೆರೆಯಾಗಿದೆ. ವಸ್ತಾರೆ ಗ್ರಾಮದಲ್ಲಿ ಸಪ್ತ ಮಾತೃಕೆಯರ ದೇವಸ್ಥಾನವಿದ್ದು ಪದ್ಮಾವತಮ್ಮ ದೇವಿ ಇಲ್ಲಿನ ಪ್ರಮುಖ ದೇವತೆ. ದೇವಸ್ಥಾನಕ್ಕೂ ಕೆರೆಗೂ ಸಂಬಂಧವಿದ್ದು ದೇವಸ್ಥಾನದಲ್ಲಿ ಇದಕ್ಕೆ ಕುರುಹು ಇದೆ. ಉತ್ಸವದ ಸಂದರ್ಭದಲ್ಲಿ ಸಪ್ತಮಾತೃಕೆಯರು ಬಂದು ಈ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ಇಲ್ಲಿರುವ ಕೆರೆಯಲ್ಲಿ ಅಮ್ಮನವರಿಗೆ ಸಂಭಂದಿಸಿದ ರಥವೊಂದು ಮುಳುಗಿದೆ ಎಂಬ ನಂಬಿಕೆ ಈ ಊರಿನ ಜನರಲ್ಲಿದ್ದು ಈ ಕೆರೆಯನ್ನು ಅಮ್ಮನವರ ಕೆರೆ ಎಂದೇ ಕರೆಯುತ್ತಾರೆ.

ಕೆರೆ 3.16 ಗುಂಟೆ ಜಾಗವಿದ್ದು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಗ್ರಾಮಸ್ಥರಾದ ಶಿವಪ್ರಕಾಶ್‌ ಹಾಗೂ ರಂಗನಾಥ್‌ ಅವರು ವಸ್ತಾರೆ ಗ್ರಾಪಂ ಹಾಗೂ ಚಿಕ್ಕಮಗಳೂರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಭಂದ ಬುಧವಾರ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಎಚ್‌.ಎಲ್‌. ನಾಗರಾಜು ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಇಟಾಚಿ ಯಂತ್ರದ ಮೂಲಕ ಒತ್ತುವರಿ ಜಾಗವನ್ನು ತೆರವು ಮಾಡಿಸಿದ್ದಾರೆ. ಉಪ ವಿಭಾಗಾಧಿಕಾರಿ ಎಚ್‌.ಎಲ್‌. ನಾಗರಾಜು, ಉಪತಹಶೀಲ್ದಾರ್‌ ಪ್ರಸನ್ನ, ರಾಜಸ್ವ ನಿರೀಕ್ಷಕ ರವಿಕುಮಾರ್‌, ಗ್ರಾಮಸ್ಥರಾದ ಶಿವಪ್ರಕಾಶ್‌, ರಂಗನಾಥ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next