Advertisement
ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸಿ.ಸುರೇಶ್ ಮಾತನಾಡಿ, 50 ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದ ಆಶಾಕಿರಣ ಇಂದು ಎಲ್ಲರನ್ನೂ ಬಿಟ್ಟು ಅಗಲಿರುವುದು ನೋವು ತಂದಿದೆ. ಕಾಫಿ ಬೆಳೆಗಾರರು ಉನ್ನತ ಮಟ್ಟದಲ್ಲಿ ಬೆಳೆಯಲು ಸಿದ್ಧಾರ್ಥ್ ಹೆಗ್ಡೆ ಕಾರಣ. ನಮ್ಮ ಮಲೆನಾಡಿನ ಕಾಫಿಯನ್ನು ದೇಶ-ವಿದೇಶದಲ್ಲಿ ಪರಿಚಯಿಸಿ ಮಲೆನಾಡಿಗೆ ಕೀರ್ತಿ ತಂದುಕೊಟ್ಟ ಹೆಗ್ಗಳಿಕೆ ಸಿದ್ಧಾರ್ಥ ಅವರಿಗೆ ಸಲ್ಲುತ್ತದೆ. ಅಂತಹ ದಿಗ್ಗಜನನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
Related Articles
Advertisement
ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಲವ, ವರ್ತಕರ ಸಂಘದ ಅಧ್ಯಕ್ಷ ಅನಿಲ್ ವಾಸ್, ಕಾರ್ಯದರ್ಶಿ ಮೂರ್ತಿ, ಕಸಾಪ ಹೋಬಳಿ ಅಧ್ಯಕ್ಷ ರವಿಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಸಂಪತ್, ತಾ. ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರವೀಣ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುದಾಬೀರ್, ತಾಪಂ ಮಾಜಿ ಸದಸ್ಯ ಮಹೇಶ್, ಪ್ರಶಾಂತ್, ಸಿದ್ಧಾರ್ಥ್, ನಾಗೇಶ್ ಹಾಗೂ ನೂರಾರು ಕಾಫಿ ಬೆಳೆಗಾರರು, ವಿವಿಧ ಸಂಘಟನೆಯವರು ಪಾಲ್ಗೊಂಡಿದ್ದರು.
ವಿ.ಜಿ.ಸಿದ್ಧಾರ್ಥ್ ನಿಧನದ ಹಿನ್ನೆಲೆಯಲ್ಲಿ ವರ್ತಕರ ಸಂಘದಿಂದ ಬೆ.11ಗಂಟೆಯಿಂದ 12ರ ವರೆಗೆ ಒಂದು ಗಂಟೆ ಕಾಲ ಅಂಗಡಿಗಳನ್ನು ಬಂದ್ ಮಾಡುವಂತೆ ಕರೆ ನೀಡಿದ್ದರಿಂದ, ಎಲ್ಲಾ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದರು.