Advertisement

ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಸೋಲು

11:52 PM Oct 01, 2022 | Team Udayavani |

ಗಾಂಧಿನಗರ್‌: ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌ನಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಮುರಳಿ ಶ್ರೀಶಂಕರ್‌ ಸೋಲನುಭವಿಸಿದ್ದಾರೆ.

Advertisement

ಚಿನ್ನದ ನಿರೀಕ್ಷೆಯಲ್ಲಿದ್ದ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಚಿನ್ನವನ್ನು ತಮಿಳುನಾಡಿನ ಜೆಸ್ವಿನ್‌ ಅಲ್ಡಿ†ನ್‌ ಗೆದ್ದರು.

ಅಲ್ಡಿನ್‌ 8.26 ಮೀ. ದೂರಕ್ಕೆ ನೆಗೆದರು. 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಅವರಿಂದ ಈ ಸಾಧನೆ ದಾಖಲಾಯಿತು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ ಅರ್ಹತೆಯಲ್ಲೂ ತೇರ್ಗಡೆಯಾದರು (8.25 ಮೀ.). ಇದರ ಜತೆಗೆ ಎರಡು ಸಲ 8 ಮೀ. ದೂರಕ್ಕೆ ನೆಗೆದರು (8.07 ಮೀ. ಹಾಗೂ 8.21 ಮೀ.).

8.36 ಮೀಟರ್‌ಗಳ ರಾಷ್ಟ್ರೀಯ ದಾಖಲೆ ಹೊಂದಿರುವ ಮುರಳಿ ಶ್ರೀಶಂಕರ್‌ ಅವರ ಇಲ್ಲಿನ ಗರಿಷ್ಠ ನೆಗೆತ 7.93 ಮೀ. ಆಗಿತ್ತು. ಇದು ಮೊದಲ ನೆಗೆತದಲ್ಲಿ ದಾಖಲಾಯಿತು. ಕೇರಳದ ಮುಹಮ್ಮದ್‌ ಅನೀಸ್‌ ಯಾಹಿಯಾ ಕಂಚು ಗೆದ್ದರು (7.92 ಮೀ.).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next