Advertisement
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೋಮ್ಮಲದೇವಿಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಡಿ.6ರ ಬುಧವಾರದಂದು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯ ಒಟ್ಟು 63 ವಿದ್ಯಾರ್ಥಿಗಳೊಂದಿಗೆ 6 ಮಂದಿ ಶಿಕ್ಷಕರು, 2 ಮಂದಿ ಡಿ ಗ್ರೂಪ್ ನೌಕರರು ಮತ್ತು ಇಬ್ಬರು ಅಡುಗೆ ಸಿಬ್ಬಂದಿ 3 ದಿನಗಳ ಕಾಲ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರು. ಡಿ.6ರ ರಾತ್ರಿ 9ಗಂಟೆಗೆ ಹೊರಟು ಡಿ.7ರ ಗುರುವಾರ ಮುಂಜಾನೆ ಜೋಗ್‌ಫಾಲ್ಸ್, ಮುಡೇìಶ್ವರ, ಕೊಲ್ಲೂರು ಮೂಲಕ ಸಂಜೆ ಉಡುಪಿಗೆ ತೆರಳಿ, ಅಲ್ಲಿ ತಂಗಿದ್ದರು. ಡಿ.8ರ ಮುಂಜಾನೆ ಉಡುಪಿ ಕೃಷ್ಣನ ದರ್ಶನ ಪಡೆದ ವಿದ್ಯಾರ್ಥಿಗಳು, ಮಣಿಪಾಲ್ ಮ್ಯೂಸಿಯಂ, ಮಲ್ಪೆ ಬೀಚ್, ಕಟೀಲು ನೋಡಿಕೊಂಡು, ಧರ್ಮಸ್ಥಳಕ್ಕೆ ತೆರಳಿದ್ದರು. ಡಿ.9ರಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಬೇಲೂರು ಮೂಲಕ ವಾಪಸ್ ಬರುವ ಸಮಯದಲ್ಲಿ ರಾತ್ರಿ 9ಗಂಟೆ ವೇಳೆಗೆ ಭೋಜನಕ್ಕೆ ಇಳಿದಿದ್ದರು. ಈ ವೇಳೆ ವಿದ್ಯಾರ್ಥಿಗಳು ಮನರಂಜನೆಗಾಗಿ ಡ್ಯಾನ್ಸ್ ಮಾಡಿದರು. ದಣಿದ ವಿದ್ಯಾರ್ಥಿಗಳು ನೀರು ಕೇಳಿದಾಗ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಕುಡಿಯುವ ನೀರಿಗೆ ಮದ್ಯ ಬೆರೆಸಿ ನೀಡಿದ್ದರು. ಈ ನೀರು ಕುಡಿದ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೋವು, ಹೊಟ್ಟೆ ಉರಿ, ವಾಂತಿಯಿಂದ ಸ್ಥಳದಲ್ಲಿಯೇ ಅಸ್ವಸ್ಥರಾದರು.
Advertisement
ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕರ ಅಮಾನತು
11:35 AM Dec 14, 2017 | |
Advertisement
Udayavani is now on Telegram. Click here to join our channel and stay updated with the latest news.