ಉಡುಪಿ: ಬದುಕಿನಲ್ಲಿ ಖನ್ನತೆ, ಸ್ವಯಂ ಅಪನಂಬಿಕೆ, ಮದ್ಯಪಾನ, ಏಕಾಂಗಿತನ ಆತ್ಮಹತ್ಯೆಗೆ ಮೂಲ ಕಾರಣವಾಗಿದ್ದು ಅವನ್ನು ತಡೆಗಟ್ಟಲು ಸಂಸ್ಥೆಯು ಆತ್ಮಹತ್ಯೆ ನಿವಾರಣ ಅಭಿಯಾನ ವಿಶ್ವದಾದ್ಯಂತ ಕೈಗೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ ಶಾಲಾ ಕಾಲೇಜುಗಳನ್ನು, ಸಂಘಟಿತ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಸಮಾಲೋಚನಾ ಕಾರ್ಯಾಗಾರ ನಡೆಯುತ್ತದೆ ಎಂದು ಡಾ| ಎ. ವಿ. ಬಾಳಿಗಾ ಆಸ್ಪತ್ರೆ ಉಡುಪಿಯ ಮಾನಸಿಕ ವೈದ್ಯ ಡಾ| ಪಿ.ವಿ. ಭಂಡಾರಿ ಹೇಳಿದರು.
ಉಡುಪಿ ಶಾರದಾ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆತ್ಮಹತ್ಯೆ ನಿವಾರಣ ಅಭಿಯಾನ ಪರವಾಗಿ ರಿಕ್ಷಾ ಚಾಲಕರಿಗೆ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಾರದಾ ಯೂನಿಯನ್ ಅಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ತರ್ಜನಿ ಇನ್ಶೂರೆನ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಸಾಮಂತ್, ನ್ಯಾಯವಾದಿ ಪಿ.ಪಿ.ಭಟ್, ಸಂಘಟನೆಯ ಕಾರ್ಯಾಧ್ಯಕ್ಷ ರಘುನಂದನ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷ ರವಿ ಪೂಜಾರಿ, ಕೋಶಾಧಿಕಾರಿ ಸುಭಾಸ್, ಕೇಶವ ಶೇರಿಗಾರ್ ಉಪಸ್ಥಿತರಿದ್ದರು. ಚಂದ್ರಶೇಖರ್ ಸ್ವಾಗತಿಸಿ, ಮಣೀಂದ್ರ ಚಕ್ರತೀರ್ಥ ನಿರೂಪಿಸಿದರು.
ಮನಪರಿವರ್ತನೆ ಮಾಡಿ
ದಾಖಲೆಗಳ ಪ್ರಕಾರ ಮೂವತ್ತರಷ್ಟು ಪ್ರತಿಶತ ಆತ್ಮಹತ್ಯೆಗಳು ಮದ್ಯಪಾನದ ಕಾರಣದಿಂದ ಸಂಭವಿಸುತ್ತಿದ್ದು, ಏಕಾಂಗಿತನವೇ ಇದಕ್ಕೆ ಕಾರಣ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಸಮಯದಲ್ಲಿ ಸಲಹೆ, ಮಾರ್ಗದರ್ಶನ ನೀಡಿ ದುವ್ಯìಸನಗಳಿಂದ ಮನಪರಿವರ್ತನೆ ಮಾಡಿ ಆತ್ಮಹತ್ಯೆಯ ಬಲೆಗೆ ಬೀಳದಂತೆ ತಡೆಗಟ್ಟಬಹುದು ಎಂದು ಡಾ| ಪಿ.ವಿ. ಭಂಡಾರಿ ಹೇಳಿದರು.