Advertisement
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತಭವನ ಸಭಾಂಗಣದಲ್ಲಿ ಗುರುವಾರ ನಡೆದ ಬಿಜೆಪಿಯ ಬೆಳಂದೂರು, ಕಡಬ ಹಾಗೂ ನೆಲ್ಯಾಡಿ ಶಕ್ತಿ ಕೇಂದ್ರಗಳ ಎಸ್.ಸಿ. ಮೋರ್ಚಾ ವತಿಯಿಂದ ನಡೆದ ಸಮರ್ಥನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮನ್ನಾಳಿದ ಕಾಂಗ್ರೆಸಿಗರು ನೆಹರೂ ಕಾಲದಿಂದಲೂ ಎಸ್ಸಿಗಳ ಭಾವನೆ, ಹಕ್ಕುಗಳನ್ನು ಕಸಿಯುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಮತ್ತು ಪ್ರಸಕ್ತ ನರೇಂದ್ರ ಮೋದಿ ಸರಕಾರ ಹಿಂದುಳಿದವರ ಕಲ್ಯಾಣಕ್ಕಾಗಿ ಅಂಬೇಡ್ಕರ್ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಹಿಂದುಳಿದವರು ಮುಖ್ಯ ವಾಹಿನಿಗೆ ಬರುವಂತಾಗಿದೆ. ರಾಮನಾಥ ಕೋವಿಂದ್ ಅವರಂತಹ ದಲಿತ ವ್ಯಕ್ತಿಯನ್ನು ದೇಶದ ಪ್ರಥಮ ಪ್ರಜೆಯನ್ನಾಗಿಸಿ ದಲಿತ, ಹಿಂದುಳಿದವರ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಂತಾಗಿದೆ. ಅಲ್ಲದೆ ಅಂಬೇಡ್ಕರ್ ಅವರ ಜನ್ಮ ಸ್ಥಳವನ್ನು ಕೇಂದ್ರ ಸರಕಾರ ಹಲವಾರು ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ಕ್ಷೇತ್ರವನ್ನಾ ಗಿಸಿರುವುದು, ಅಂಬೇಡ್ಕರ್ ಹೆಸರಿನಲ್ಲಿ ಸಂಶೋಧನ ಕೇಂದ್ರ ನಿರ್ಮಿಸಿರುವುದು ಮೊದಲಾದ ಕಲ್ಯಾಣ ಯೋಜನೆಗಳ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಕೊಡುತ್ತಿದೆ. ಬಿಜೆಪಿ ಸರಕಾರದ ಅವಧಿಯ ಜನಪರ ಯೋಜನೆಗಳ ಕೈಪಿಡಿ ಮಾಡಲಾಗಿದ್ದು, ಮನೆ ಮನೆ ತಲುಪಿಸಿ ಕರ್ನಾಟಕದಲ್ಲಿ ಬಿಜೆಪಿಯ ಮಿಷನ್ 150+ನ್ನು ಗುರಿತಲುಪಬೇಕು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು
ಎಂದರು.
Related Articles
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಮಾತನಾಡಿ, ಶುದ್ಧ ಮನಸ್ಸಿನಿಂದ ಕಾರ್ಯ ಕ್ಷೇತ್ರದಲ್ಲಿ ದೃಢ ಆತ್ಮವಿಶ್ವಾಸಬೇಕು ಎನ್ನುವುದು ಅಂಬೇಡ್ಕರ್ ಅವರ ನಿಲುವು. ಅಂಬೇಡ್ಕರ್ ಅವರ ವಾದಕ್ಕೆ ಬೆಲೆ ಕೊಟ್ಟದ್ದು ಬಿಜೆಪಿ ಅವಧಿಯಲ್ಲಿ ಮಾತ್ರ. ಓಟು ರಾಜಕಾರಣ ಮಾಡುವ ಕಾಂಗ್ರೆಸ್ಸಿಗರು ಸ್ವಹಿತ ಬಿಟ್ಟರೆ ಅಭಿವೃದ್ಧಿ ಚಿಂತಿಸುವ ಜಾಯ ಮಾನದವರಲ್ಲ. ಬಿಜೆಪಿಯಲ್ಲಿ ಸಂಘಟನ ಶಕ್ತಿ ಇದೆ. ಹಾಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣವಾಗುತ್ತದೆ ಎಂದರು.
Advertisement
ಬಿಜೆಪಿ ಹಿರಿಯ ಕಾರ್ಯಕರ್ತ,ಎಪಿಎಂಸಿ ಮಾಜಿ ನಿರ್ದೆಶಕ ಸೋಮನಾಥ ಕನ್ಯಾಮಂಗಲ ಸಭಾ ಕಾರ್ಯಕ್ರಮವನ್ನುಉದ್ಘಾಟಿಸಿದರು. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಎಸ್.ಸಿ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ದಿನೇಶ್ ಅಮುಟ್ ರು, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಪುತ್ತೂರು ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಎಸ್ಸಿ ಮೋರ್ಚಾ ಕೊಡುಗು ಜಿಲ್ಲಾಧ್ಯಕ್ಷ ಸತೀಶ್, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಡಿ, ಮುಖಂಡರಾದ ವಿನಯ ನೇತ್ರ, ಕೇಶವ ಮಾಸ್ತರ್, ಕುಂಞ ಕಮ್ಮತ್ತಿಲ, ಲಲಿತಾ ಈಶ್ವರ, ಶೀನಪ್ಪ, ಕೊರಗಪ್ಪ, ಕೊರಗಪ್ಪ ಪಂಜೋಡಿ, ರಾಜೇಶ್ವರಿ ಉಪಸ್ಥಿತರಿದ್ದರು. ಬಿಜೆಪಿ ಸೇರ್ಪಡೆ
ವಿವಿಧ ಪಕ್ಷಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹಲವಾರು ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದ ಧ್ವಜ, ಶಾಲು ನೀಡಿ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಸ್ತಾವಿಸಿದರು. ಬಾಳಪ್ಪ ಕಳಂಜ ಸ್ವಾಗತಿಸಿದರು. ಶೀನಪ್ಪ ವಂದಿಸಿದರು. ಬಿಜೆಪಿ ಮುಖಂಡರಾದ ಲಕ್ಷ್ಮೀನಾರಾಯಣ ರಾವ್ ಆತೂರು, ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಬಳಿಕ ಗುಂಪುಗಳಲ್ಲಿ ಸಮಾಲೋಚನೆ, ಸಮಾರೋಪ ಸಮಾರಂಭ ನಡೆಯಿತು.