Advertisement
ಹಲವೆಡೆ ಬಿತ್ತನೆಗೆ ಪೂರಕವಾಗುವಷ್ಟು ಮಳೆಯಾಗಿದ್ದು, ಇನ್ನೂ ಕೆಲವೆಡೆ ಮಳೆಯ ಅಗತ್ಯವಾಗಿದ್ದು, ಆದರೂ ರೈತ ಸಮುದಾಯ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಶುಕ್ರವಾರವರೆಗೆ ಶೇ.13ರಷ್ಟು ಬಿತ್ತನೆ ನಡೆದಿದ್ದು, ಸೋಮವಾರದವರೆಗೆ ಶೇ.40ರಷ್ಟು ಬಿತ್ತನೆ ಆಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.
Related Articles
Advertisement
ಎಣ್ಣೆ ಕಾಳು: ಆಳಂದ ವಲಯಕ್ಕೆ 2477 ಹೆಕ್ಟೇರ್, ಖಜೂರಿ 4272 ಹೆಕ್ಟೇರ್, ನರೋಣಾ 3642, ಮಾದನಹಿಪ್ಪರಗಾ 2027, ನಿಂಬರಗಾ 2217 ಹೆಕ್ಟೇರ್ ಸೇರಿ ಒಟ್ಟು 14,635 ಹೆಕ್ಟೇರ್ ಬಿತ್ತನೆ ಗುರಿಯಿದೆ.
ವಾಣಿಜ್ಯ ಬೆಳೆ: ಆಳಂದ ವಲಯ 643 ಹೆಕ್ಟೇರ್, ಖಜೂರಿ 468 ಹೆಕ್ಟೇರ್, ನರೋಣಾ 775 ಹೆಕ್ಟೇರ್, ಮಾದನಹಿಪ್ಪರಗಾ 338 ಹೆಕ್ಟೇರ್, ನಿಂಬರಗಾ 3607 ಹೆಕ್ಟೇರ್ ಸೇರಿ ಒಟ್ಟು 5831 ಹೆಕ್ಟೇರ್ ಗುರಿಯಿದೆ. ಹೀಗೆ ಒಟ್ಟು ನೀರಾವರಿ ಹಾಗೂ ಖುಷ್ಕಿ ಸೇರಿ ಬಿತ್ತನೆಯ ಕ್ಷೇತ್ರವನ್ನು ಆಳಂದ ವಲಯದ 23026 ಹೆಕ್ಟೇರ್, ಖಜೂರಿ 26641 ಹೆಕ್ಟೇರ್, ನರೋಣಾ 25443 ಹೆಕ್ಟೇರ್, ಮಾದನಹಿಪ್ಪರಗಾ 22491 ಹೆಕ್ಟೇರ್, ನಿಂಬರಗಾ 33530 ಹೆಕ್ಟೇರ್ ಒಳಗೊಂಡು ಈ ಬಾರಿ 1,31,131 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಸೋಮವಾರದ ವರೆಗೆ ಮಳೆಯ ಬಿಡುವು ನೀಡಿದ್ದರಿಂದ ಶೇ.40ರಷ್ಟು ಬಿತ್ತನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಪರ್ಯಾಯ ಬಿತ್ತನೆ ಕೈಗೊಳ್ಳಿ: ಈ ನಡುವೆ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೀಜದ ಬಿತ್ತನೆಗೆ ಗುರಿಯಿಟ್ಟುಕೊಂಡಿದ್ದ ಕೃಷಿ ಇಲಾಖೆ ವಿತರಣೆಗಾಗಿ ಈ ಬೀಜದ ದಾಸ್ತಾನು ಕೈಗೊಂಡಿತ್ತಾದರು. ನಂತರ ಈ ಬೀಜ ದೋಷದಿಂದ ಕೂಡಿದೆ. ದಾಸ್ತಾನು ಕೈಗೊಂಡಿದ್ದ ಬೀಜವನ್ನು ವಿತರಣೆ ಹಂತದಲ್ಲೇ ಹಠಾತಾಗಿ ನಿಲ್ಲಿಸಿ ಬೀಜ ವಿತರಣೆ ಹಾಗೂ ಬಿತ್ತನೆಗೆ ನಿರ್ಬಂಧಿಸಿದೆ. ವಿತರಣೆ ಮಾಡಿದ ಬೀಜವನ್ನು ವಾಪಸ್ ಪಡೆಯಲಾಗಿದೆ. ಒಂದೊಮ್ಮೆ ಬೀಜ ವಾಪಸ್ ನೀಡದೆ ಅಥವಾ ಖಾಸಗಿವಾಗಿ ಬೀಜ ಖರೀದಿಸಿ ಬಿತ್ತನೆ ಕೈಗೊಂಡರೆ ರೈತರೆ ಹೊಣೆಯಾಗುತ್ತಾರೆ. ಇದಕ್ಕೆ ಸರ್ಕಾರ ಅಥವಾ ಕೃಷಿ ಇಲಾಖೆ ಹೊಣೆಯಾಗುವುದಿಲ್ಲ. ಸೋಯಾಬಿನ್ ಬಿತ್ತನೆ ಕೈಗೊಳ್ಳಬಾರದು. ಪರ್ಯಾಯವಾಗಿ ತೊಗರಿ ಇನ್ನಿತರ ಬಿತ್ತನೆ ಕೈಗೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮನವಿ ಮಾಡಿದ್ದಾರೆ.
ಮಹಾದೇವ ವಡಗಾಂವ