Advertisement

ಆಲಮೇಲಕ್ಕೂ ಕಾಲಿಟ್ಟ ಕೋವಿಡ್ ; ಸೋಂಕಿತ ಆಸ್ಪತ್ರೆಗೆ

11:47 AM May 31, 2020 | Naveen |

ಆಲಮೇಲ: ಪಟ್ಟಣಕ್ಕೆ ಪ್ರಥಮ ಕೋವಿಡ್ ಸೊಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಇರಿ ಎಂದು ತಹಶೀಲ್ದಾರ್‌ ಸಂಜುಕುಮಾರ ದಾಸರ ಹೇಳಿದರು.

Advertisement

ಪಟ್ಟಣದ ಕಡಣಿ ಅಗಸಿಯ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಈ ವ್ಯಕ್ತಿ ಕಳೆದ 15ದಿನಗಳ ಹಿಂದೆ ಮಹಾರಾಷ್ಟ್ರದ ಸೋಲ್ಲಾಪೂರ ಖಾಸಗಿ ಆಸ್ಪತ್ರೆಗೆ ಅನ್ಯ ಸಮಸ್ಯೆಗಳ ಕಾರಣ ಚಿಕಿತ್ಸೆಗೆಂದು ತೆರಳಿದ್ದರು. ನಂತರ ಮರಳಿ ಬಂದಿದ್ದ ಅವರನ್ನು ತೋಟದ ಮನೆಯಲ್ಲಿ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಶನಿವಾರ ವರದಿ ಬಂದಿದ್ದು, ಕ್ವಾರಂಟೈನ್‌ ಅವಧಿ ಶುಕ್ರವಾರವ ಪೂರೈಸಿದ್ದು, ಪಟ್ಟಣದಲ್ಲಿ ಎಲ್ಲೂ ಸಂಚಾರ ಮಾಡಿಲ್ಲ. ಆದ್ದರಿಂದ ಪಟ್ಟಣದ ಯಾವುದೇ ಪ್ರದೇಶವನ್ನು ಸೀಲ್‌ಡೌನ್‌ ಮಾಡುವ ಪ್ರಸಂಗ್‌ ಬರುವದಿಲ್ಲ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವ ತಾಯಿ, ಪತ್ನಿ ಹಾಗೂ ಮಗಳನ್ನು ಸಿಂದಗಿ ಸ್ವಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿ ನಿಗಾ ಇಡಲಾಗಿದೆ. ಆಲಮೇಲ ಕ್ವಾರಂಟೈನ್‌ ಕೇಂದ್ರದಿಂದ 7ದಿನಗಳ ಅವಧಿಯನ್ನು ಪೂರೈಸಿದ್ದ 70ಕ್ಕೂ ಹೆಚ್ಚು ಮಂದಿಯನ್ನು ಶುಕ್ರವಾರ ಸಂಜೆ ಮತ್ತು ಶನಿವಾರ ಮನೆಗೆ ಕಳುಹಿಸಿ ಕೊಡಲಾಗಿದೆ. ಇನ್ನು 44 ಜನರು ಕೇಂದ್ರದಲ್ಲಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ಗುರುರಾಜ ಗತಾಟೆ ತಿಳಿಸಿದರು.

ಪಟ್ಟಣದಲ್ಲಿ ಕೆಲವರು ರಾತ್ರಿ ವೇಳೆ ಮಹಾರಾಷ್ಟ್ರದಿಂದ ಕಳ್ಳ ದಾರಿ ಮೂಲಕ ಬಂದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎನ್ನವು ಮಾಹಿತಿ ಬಂದಿದೆ. ಅವರನ್ನು ಯಾವುದೇ ಹೊಂ ಕ್ವಾರಂಟೈನ್‌ ಅಥವಾ ಸರ್ಕಾರಿ ಕ್ವಾರಂಟೈನ್‌ ಕೇಂದ್ರದಲ್ಲೂ ಇಡಲಾಗಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ಸಹಜವಾಗಿ ಆತಂಕ ಮನೆಮಾಡಿದೆ. ಸೋಂಕಿತ ವ್ಯಕ್ತಿಯನ್ನು ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್‌ ವಾಹನ ಬಂದಾಗ ನೋಡಲು ಜನರ ದಂಡೆ ದೌಡಾಯಿಸಿತ್ತು. ಸೋಂಕಿತ ವ್ಯಕ್ತಿಯನ್ನ ಮತ್ತು ಅವರ ಕುಟುಂಬವನ್ನು ಕರೆದುಕೊಂಡು ಹೋಗುವುದನ್ನು ಮೊಬೈಲ್‌ಗ‌ಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next