Advertisement
ರವಿವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಕಾಕಡಾರತಿ, ಕಾರ್ತಿಕ ಇಳಿಸುವುದು ಸೇರಿದಂತೆ ವಿವಿಧ ರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಹರಶಾವಿಗೆ (ದಾಸೋಹ), ಅನ್ನದಾಸೋಹ ಜರುಗಿತು. ವಿಶ್ವೇಶತೀರ್ಥ ಶ್ರೀಪಾದಂಗಳವರ ಸಭಾಮಂಟಪದಲ್ಲಿ ಹರಿದಾಸ ಸಾಹಿತ್ಯಸಂಗೀತ ವೇದಿಕೆಯಲ್ಲಿ ತೆಂಗಿನ ತೋಟದ ಮೈದಾನದಲ್ಲಿ ನಿರಂತರ ದಾಸವಾಣಿ, ತಬಲಾ ಸೋಲೋ, ಜುಗಲಬಂಧಿ ಸೇರಿದಂತೆ ವಿವಿಧ ಸಂಗೀತ ರಸದೌತಣವನ್ನು ವೀಣಾ ಬಡಿಗೇರ ಮತ್ತು ವಾಣಿಶ್ರೀ ಧನ್ವಂತರಿಯವರ ಜುಗಲ್ ಬಂಧಿ, ವೀಣಾ ಥಿಟೆ, ಮೈಸೂರು ರಾಮಚಂದ್ರಾರಾವ್ ದಾಸವಾಣಿ, ಅರುಣಕುಮಾರ ಅವರ ತಾನಸೇನ್ ವಾದನ,ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಹಾಡಿದ ಸೂಳ್ಳು ನಮ್ಮಲ್ಲಿ ಇಲ್ಲವಯ್ನಾ ಸುಳ್ಳೇ ನಮ್ಮನೆ ದೇವರು, ಬನ್ನಿಸಲವಳಲ್ಲ ನಿಮ್ಮ ಪ್ರಸನ್ನಮೂರ್ತಿ ಯಲಗೂರವಾಸ ಎನ್ನುವ ಗಾಯನಕ್ಕೆ ನೆರೆದಜನ ತಲೆದೂಗುವಂತಾಗಿತ್ತು. ನಾಡಿನ ಖ್ಯಾತ ಗಾಯಕರು ಹಾಡಿದ ಹಿಂದೂಸ್ಥಾನಿ ಸಂಗೀತ, ದಾಸ ವಾಣಿ, ಭಕ್ತಿ ಗೀತೆಗಳ ಮೂಲಕ ನೆರೆದ ಜನತೆಯ ಮನಸೂರೆಗೊಂಡವು.
Related Articles
Advertisement
ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಹರಕೆಗಳು ಈಡೇರಿದ್ದರಿಂದ ಶನಿವಾರದಿಂದ ರವಿವಾರ ಸಂಜೆಯವರೆಗೂ ಕೃಷ್ಣಾನದಿಯಲ್ಲಿ ಮಿಂದು ದೇವಸ್ಥಾನದವರೆಗೂ ದೀಡ ನಮಸ್ಕಾರಗಳನ್ನು ಹಾಕುತ್ತಿರುವವರು ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗಿತ್ತು.
ಶಂಕರ ಜಲ್ಲಿ