Advertisement

ಮೃತನಾಗಿದ್ದಾನೆ ಎಂದು ನಂಬಲಾಗಿದ್ದ ಉಗ್ರ ಜವಾಹಿರಿ ಪ್ರತ್ಯಕ್ಷ!

09:25 AM Sep 13, 2021 | Team Udayavani |

ಬೈರೂತ್‌: ತಿಂಗಳು ಗಳ ಹಿಂದೆ ಮೃತನಾಗಿದ್ದಾನೆ ಎಂದು ನಂಬಲಾಗಿದ್ದ ಅಲ್‌ ಕಾಯಿದಾ ನಾಯಕ ಅಯ್ಮನ್‌ ಅಲ್‌-ಜವಾಹಿರಿ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದಾನೆ!

Advertisement

ಜೆಹಾದ್‌ ಬೆಂಬಲಿಸುವ ವೆಬ್‌ಸೈಟ್‌ ಒಂದರಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಆತನ ವೀಡಿಯೋವನ್ನು ಅಮೆರಿಕದ ಸರ್ಚ್‌ ಫಾರ್‌ ಇಂಟರ್‌ನ್ಯಾಶ ನಲ್‌ ಟೆರರಿಸ್ಟ್‌ ಎಂಟಿಟೀಸ್‌ (ಎಸ್‌ಐಟಿಇ) ಪತ್ತೆ ಹಚ್ಚಿದೆ.

9/11 ದಾಳಿಯ 20ನೇ ಸಂಸ್ಮರಣ ದಿನದ ಹಿನ್ನೆಲೆಯಲ್ಲಿ ಈ ವೀಡಿಯೋ ಅಪ್‌ಲೋಡ್‌ ಆಗಿದೆ. ವೀಡಿಯೋದಲ್ಲಿ ಜಗತ್ತಿನ ನಾನಾ ಕಡೆ ಅಲ್‌ ಕಾಯಿದಾ ನಡೆಸಿರುವ ದಾಳಿ ಗಳನ್ನು ಜವಾಹಿರಿ  ಸಮರ್ಥಿಸಿ ಕೊಂಡಿದ್ದಾನೆ. ವೀಡಿಯೋ ದಲ್ಲಿ ಆತ ಸದ್ಯದ ಆಫ್ಘಾನಿ ಸ್ಥಾನದ ಪರಿಸ್ಥಿತಿಯನ್ನು ಉಲ್ಲೇಖೀಸಿಲ್ಲ. ಆದ್ದರಿಂದ ಈ ವೀಡಿಯೋ ಹೊಸದಲ್ಲ ಎಂಬ ಅನುಮಾನವನ್ನೂ ಎಸ್‌ಐಟಿಇ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next