ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ಕುರಿತಾಗಿ ಬಿಜೆಪಿ ವಕ್ತಾರರು ನೀಡಿರುವ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿರುವಂತೆಯೇ ಉಗ್ರ ಸಂಘಟನೆ ಅಲ್‌ಕಾಯಿದಾ ಭಾರತದಲ್ಲಿ ಆತ್ಮಾಹುತಿ ದಾಳಿಯ ಬೆದರಿಕೆಯೊಡ್ಡಿದೆ.
ಸದ್ಯದಲ್ಲೇ ದಿಲ್ಲಿ, ಮುಂಬಯಿ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ದಾಳಿ ಗಳನ್ನು ನಡೆಸುವುದಾಗಿ ಜೂ. 6ರಂದು ಬಿಡುಗಡೆ ಮಾಡಿರುವ ಬೆದರಿಕೆ ಪತ್ರ ದಲ್ಲಿ ಅಲ್‌ಕಾಯಿದಾ ಎಚ್ಚರಿಸಿದೆ. “ನಾವು ನಮ್ಮ ಪ್ರವಾದಿಯವರ ಘನತೆಗಾಗಿ ಹೋರಾಡು ತ್ತೇವೆ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಮಂಗಳ ವಾರ ಈ ಪತ್ರದ ವಿವರ ಬಹಿರಂಗ ಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅದರಲ್ಲಿ ಪ್ರವಾದಿಯವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವವರನ್ನು ಹತ್ಯೆಗೈಯ್ಯುವುದಾಗಿ ಬೆದರಿಕೆ ಹಾಕಲಾಗಿದೆ.
“ಕೆಲವು ದಿನಗಳ ಹಿಂದಷ್ಟೇ ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಕೆಲವರು ಭಾರತದ ಟಿವಿ ಚಾನೆಲ್ ಒಂದರಲ್ಲಿ ಪ್ರವಾದಿಯವರನ್ನು ಅವಹೇಳನ ಮಾಡಿದ್ದಾರೆ. ಅಂಥವರನ್ನು ನಾವು ಕೊಲ್ಲುತ್ತೇವೆ. ಯಾವುದೇ ಭದ್ರತೆ, ಕ್ಷಮಾ ದಾನ, ಶಾಂತಿ ಮಾತುಕತೆ ನಿಮ್ಮನ್ನು ರಕ್ಷಿ ಸಲು ಸಾಧ್ಯವಿಲ್ಲ. ಪ್ರತೀಕಾರ ತೀರಿಸಿಯೇ ಸಿದ್ಧ’ ಎಂದು ಪತ್ರದಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಆಂಗ್ಲ ಸುದ್ದಿವಾಹಿನಿಯೊಂದರ ಸಂವಾದದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಯವರ ಕುರಿತು ಆಕ್ಷೇ ಪಾರ್ಹ ಹೇಳಿಕೆ ನೀಡಿದ್ದರು. ಮತ್ತೂಬ್ಬ ವಕ್ತಾರ ನವೀನ್ ಜಿಂದಾಲ್ ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ಕೇಂದ್ರ ಸರಕಾರ ಕೂಡಲೇ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರೆ, ಜಿಂದಾಲ್ ಅವರನ್ನು ವಜಾ ಮಾಡಿತ್ತು.