Advertisement
ಅಕ್ಷಯ ತೃತೀಯಾದಂದು ಚಿನ್ನಾ ಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕನುಗುಣ ವಾಗಿ ತಲೆತಲಾಂತರದಿಂದಲೂ ಅಕ್ಷಯ ತೃತೀಯಾದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಅದರಂತೆ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಆಭರಣ ಪ್ರಿಯರು ಚಿನ್ನ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಅಕ್ಷಯ ತೃತೀಯಾದಂದು ಮನೆ ಗೊಯ್ಯುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಚಿನ್ನಾಭರಣ ಖರೀದಿ ಸಂಬಂಧ ಮಾರುಕಟ್ಟೆಯ ಬಗ್ಗೆ ಪರಿಶೀಲಿಸಿದಾಗ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವ್ಯವಹಾರ ನಡೆದಿದೆ ಎನ್ನುತ್ತಾರೆ ಚಿನ್ನಾಭರಣಗಳ ಮಳಿಗೆಯ ಮಾಲಕರು. ವಿವಿಧ ಚಿನ್ನಾಭರಣ ಮಳಿಗೆಗಳು ದರ ಕಡಿತ, ಉಡುಗೊರೆ, ಉಚಿತ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿ ಗ್ರಾಹಕರನ್ನು ಆಕರ್ಷಿಸಿದ್ದವು. ಇದರಿಂದ ಸಹಜವಾಗಿ ಗ್ರಾಹಕರೂ ಆಕರ್ಷಿತರಾಗಿ ಚಿನ್ನ ಖರೀದಿಯಲ್ಲಿ ತೊಡಗಿದ್ದರು. ರಾತ್ರಿ ವೇಳೆಯಲ್ಲಿಯೂ ಚಿನ್ನದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗಿತ್ತು.