ಮುಂಬಯಿ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮೂರು ನಿಮಿಷದಲ್ಲಿ 184 ಸೆಲ್ಫಿ ತೆಗೆದು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಅವರ ಮುಂದಿನ ಹಾಸ್ಯ ಸಿನೆಮಾ “ಸೆಲ್ಫಿ’ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಅವರು ಅಭಿಮಾನಿಗಳೊಂದಿಗೆ ಸತತವಾಗಿ ಸೆಲ್ಫಿ ಪಡೆದುಕೊಂಡರು. ಈ ವೇಳೆ ಮೂರೇ ನಿಮಿಷದಲ್ಲಿ 184 ಸೆಲ್ಫಿಗಳಿಗೆ ಪೋಸ್ ನೀಡಿದರು, ಮಾತ್ರವಲ್ಲ ಅದರ ವೀಡಿಯೋ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪರಿಗಣಿಸಿದ ಗಿನ್ನೆಸ್ ಸದಸ್ಯರು ಅವರಿಗೆ ದಾಖಲೆ ಪ್ರಮಾಣಪತ್ರವನ್ನು ನೀಡಿದರು.
ಇದೇ ವೇಳೆ ಸಂದರ್ಶನವೊಂದರಲ್ಲಿ ತಮ್ಮ ಕೆನಡಾ ಪಾಸ್‌ಪೋರ್ಟ್ ಕುರಿತು ಮಾತನಾಡಿದ ಅಕ್ಷಯ್, “ಭಾರತವೇ ನನ್ನ ಸರ್ವಸ್ವ. ನಾನು ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿ ಹಾಕಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.