ಮುಂಬಯಿ: ಬಾಲಿವುಡ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ರನ್ನು ಒಟ್ಟಿಗೆ ತೆರೆ ಮೇಲೆ ಕಾಣೋದಕ್ಕೆ ಅಭಿಮಾನಿಗಳು ಕೌತುಕರಾಗಿರುವ ನಡುವೆಯೇ,ಈ ಜೋಡಿಯ ವಿಡಿಯೋ ಒಂದು ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.
ಅಕ್ಷಯ್ ಅವರ 90ರ ದಶಕದ ಸೂಪರ್ ಹಿಟ್ ಸಿನಿಮಾ ಮೈನ್ ಕಿಲಾಡಿ ಹಾಡನ್ನು,ಅವರ ಮುಂದಿನ ಸೆಲ್ಫಿಯಲ್ಲಿ ರೀ ಕ್ರಿಯೆಟ್ ಮಾಡಲಾಗಿದೆ. ಈಗ ಅದೇ ಹಾಡಿಗೆ ಅಕ್ಷಯ್ ಹಾಗೂ ಶ್ರಾಫ್ ಹೆಜ್ಜೆ ಹಾಕಿದ್ದಾರೆ.ಬ್ಲ್ಯಾಕ್ ಆ್ಯಂಡ್ ಬ್ಲಾಕ್ ಡ್ರೆಸ್‌ನಲ್ಲಿ ಕ್ಲಾಸಿ ಡಾನ್ಸ್ ಮಾಡಿ, ಕೊನೆಯಲ್ಲಿ ಅಪ್ಪುಗೆಯೊಂದಿಗೆ ವಿಡಿಯೋ ಮುಗಿದಿದೆ.
ಈ ವಿಡಿಯೋವನ್ನು ಜಾಲತಾಣದಲ್ಲಿ ಅಕ್ಷಯ್ ಹಂಚಿಕೊಂಡಿದ್ದಾರೆ ಅಲ್ಲದೇ,ನಿಮ್ಮ ಬೆಸ್ಟಿಗಳ ಜತೆಗೆ ಈ ಹಾಡಿಗೆ ಡಾನ್ಸ್ ಮಾಡುವಿರಾ ?ಎಂದು ಅಭಿಮಾನಿಗಳಿಗೆ ಚಾಲೆಂಜ್ ನೀಡಿದ್ದಾರೆ. ವಿಡಿಯೋ 21 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಅಭಿಮಾನಿಗಳು ಕೂಡ ಹಾಡಿಗೆ ಹೆಜ್ಜೆ ಹಾಕಲು ಸೈ ಎಂದಿದ್ದಾರೆ.