Advertisement

ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ನಟನೆಯ ನೂತನ ಚಿತ್ರ “ಸೆಲ್ಫಿ”; ಟೀಸರ್ ಬಿಡುಗಡೆ

04:55 PM Jan 12, 2022 | Team Udayavani |

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಶ್ಮಿ ಜತೆಯಾಗಿ ನಟಿಸಲು ಸಜ್ಜಾಗಿದ್ದು, ನೂತನ ಚಿತ್ರಕ್ಕೆ “ಸೆಲ್ಫಿ” ಎಂದು ಹೆಸರಿಡಲಾಗಿದೆ. ರಾಜ್ ಮೆಹ್ತಾ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಬಿಟೌನ್ ವರದಿ ತಿಳಿಸಿದೆ.

Advertisement

ಅಕ್ಷಯ್ ಕುಮಾರ್ ಜತೆಗೆ ಇಮ್ರಾನ್ ಹಶ್ಮಿ ಕೂಡಾ ಮುಖ್ಯಭೂಮಿಕೆಯಲ್ಲಿದ್ದಾರೆ. ಮುಂಬರುವ ಚಿತ್ರದ ಟೀಸರ್ ಅನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನಟ ಅಕ್ಷಯ್ ಕುಮಾರ್ ಇಂದು ಬೆಳಗ್ಗೆ ತಮ್ಮ ಇನ್ಸ್ ಟಾಗ್ರಾಮ್ ಖಾತೆಯಲ್ಲಿ ಸೆಲ್ಫಿ ಫೋಸ್ ನ ಫೋಟೊವೊಂದನ್ನು ಶೇರ್ ಮಾಡಿದ್ದು, ಅದು ತಮ್ಮ ಮುಂಬರುವ ಚಿತ್ರದ ಹೆಸರು ಎಂಬುದು ಇದೀಗ ಜಗಜ್ಜಾಹೀರಾಗಿದೆ.

ಸೆಲ್ಫಿ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಶೂಟಿಂಗ್ ಆರಂಭವಾಗಬೇಕಾಗಿದೆ. ಸೆಲ್ಫಿ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಕೂಡಾ ಚಿತ್ರದ ಟೀಸರ್ ಹಂಚಿಕೊಂಡಿದ್ದು, ಇಬ್ಬರು ಅದ್ಭುತ ನಟರು ಸೆಲ್ಫಿ ಚಿತ್ರದಲ್ಲಿ ನಟಿಸಲಿದ್ದು, ಇದೊಂದು ಉತ್ತಮ ಹಾಸ್ಯಚಿತ್ರವಾಗಿ ಮೂಡಿಬರಲಿದೆ ಎಂಬ ವಿಶ್ವಾಸ ಇರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next