Advertisement

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

03:58 PM Oct 17, 2021 | Team Udayavani |

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಗೋರ್ಖಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೆ (ಶುಕ್ರವಾರ) ಈ ಚಿತ್ರದ ಫಸ್ಟ್ ಲುಕ್‍ ಬಿಡುಗಡೆಯಾಯಿತು. ಈ ಚಿತ್ರದ ನಾಯಕ ನಟ ಅಕ್ಷಯ್ ಕುಮಾರ್ ಗೋರ್ಖಾ ಚಿತ್ರದ ಮೊದಲ ನೋಟವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡರು.

Advertisement

ಗೋರ್ಖಾ ಸಿನಿಮಾದ ಮೊದಲ ಲುಕ್ ಸಿನಿರಸಿಕರ ಗಮನ ಸೆಳೆಯುತ್ತಿದೆ. ಆದರೆ, ಮಾಜಿ ಸೇನಾಧಿಕಾರಿಯೋರ್ವ ಗೋರ್ಖಾ ಚಿತ್ರದ ಪೋಸ್ಟರ್ ನಲ್ಲಿರುವ ತಪ್ಪನ್ನು ಕಂಡು ಹಿಡಿದು, ಚಿತ್ರತಂಡದ ಗಮನಕ್ಕೆ ತಂದಿದ್ದಾರೆ.

“ಗೋರ್ಖಾ’ ಪೋಸ್ಟರ್‌ನಲ್ಲಿದ್ದ ಲೋಪವೊಂದನ್ನು ಮೇಜರ್‌ ಮಾಣಿಕ್‌ ಎಂ. ಜಾಲಿ ಎಂಬ ಮಾಜಿ ಸೇನಾಧಿಕಾರಿ ಪತ್ತೆ ಹಚ್ಚಿದ್ದಾರೆ. ಪೋಸ್ಟರ್ ನಲ್ಲಿ ಅಕ್ಷಯ್ ಕುಮಾರ್ ಕತ್ತಿಯನ್ನು ಹಿಡಿದಿದ್ದರು. ಇದನ್ನು ಅಕ್ಷಯ್‌ ಗಮನಕ್ಕೆ ತಂದಿರುವ ಮಾಣಿಕ್‌, ಗೋರ್ಖಾ ಪಡೆಯ ಯೋಧರು ಖುಕ್ರಿ ಬಳಸುತ್ತಾರೆ. ಆದರೆ, ನೀವು ಕತ್ತಿ ಹಿಡಿದಿದ್ದೀರಿ ಎಂದು ಹೇಳಿದ್ದಾರೆ. ಜೊತೆಗೆ ವೀರ ಸೇನಾಧಿಕಾರಿಯ ಕುರಿತು ಸಿನಿಮಾ ಮಾಡುತ್ತಿರುವುದಕ್ಕೆ ಅಕ್ಷಯ್ ಕುಮಾರ್ ಅವರಿಗೆ ಶುಭಾಶಯ ಕೋರಿದ್ದಾರೆ.

ಇನ್ನು ಮಾಣಿಕ್‌ ಯವರ ಸಲಹೆ ಯನ್ನು ಅಕ್ಷಯ್‌ ಕುಮಾರ್‌ ಸ್ವಾಗತಿಸಿದ್ದಾರೆ. ಪೋಸ್ಟರ್‌ನಲ್ಲಿ ಗೋರ್ಖಾ ಪಡೆ ಬಳಸುವ ಖುಕ್ರಿ (ಡ್ಯಾಗರ್‌ ಮಾದರಿ ಆಯುಧ) ಬದಲು ಕತ್ತಿ ಬಳಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಸಲಹೆಯನ್ನು ಸ್ವಾಗತಿಸಿ, ಅವರಿಗೆ ಧನ್ಯವಾದ ಹೇಳಿರುವ ಅಕ್ಷಯ್‌, ಇಂಥ ಪ್ರಮುಖ ಸಲಹೆಗಳನ್ನು ನೀಡಲು ಸರ್ವರಿಗೂ ಅವಕಾಶವಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next