ಲಂಡನ್: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಹಾಗೂ ಬ್ರಿಟನ್‌ನ ವಿತ್ತ ಸಚಿವ ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಬಗ್ಗೆ ಹುಟ್ಟಿಕೊಂಡಿರುವ ತೆರಿಗೆ ವಿವಾದಕ್ಕೆ ಇದೀಗ ಅಕ್ಷತಾ ಅವರೆ ತೆರೆ ಎಳೆದಿದ್ದಾರೆ.
ಇನ್ನು ಮುಂದೆ ಯು.ಕೆ. ಅಲ್ಲಿನ ಆದಾಯದ ಜತೆ ಭಾರತದಲ್ಲಿನ ಆದಾಯಕ್ಕೂ ಯು.ಕೆ. ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇನೆ ಎಂದು ಅವರು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ:ಲಷ್ಕರ್ ಕಮಾಂಡರ್ ಬಲಿ: ಜನವರಿಯಿಂದ ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರೆಷ್ಟು?
“ಈವರೆಗೆ ನಾನು ಯು.ಕೆ ಅಲ್ಲಿನ ಆದಾಯಕ್ಕೆ ಇಲ್ಲಿನ ತೆರಿಗೆ ಕಟ್ಟುತ್ತಿದ್ದೆ ಹಾಗೂ ಭಾರತ ಸೇರಿ ಬೇರೆ ದೇಶಗಳಿಂದ ನನಗೆ ಬರುತ್ತಿದ್ದ ಆದಾಯಕ್ಕೆ ಯು.ಕೆ ನಿಯಮದಂತೆ ಅಂತಾರಾಷ್ಟ್ರೀಯ ತೆರಿಗೆಯನ್ನು ಕಟ್ಟುತ್ತಿದ್ದೆ. ಆದರೆ ತೆರಿಗೆ ಭಾರತದ ಆದಾಯಕ್ಕೆ ತೆರಿಗೆ ತಪ್ಪಿಸುವುದಕ್ಕಾಗಿಯೇ ನಾನು “ನಿವಾಸಿಯಲ್ಲ’ ಪ್ರಮಾಣ ಪತ್ರ ಪಡೆದಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಇದು ನನ್ನ ಪತಿಯ ಜೀವನಕ್ಕೆ ತೊಂದರೆ ಕೊಡುತ್ತಿದೆ. ಹಾಗಾಗಿ ನಾನು ಈಗ ಮುಗಿದಿರುವ ಆರ್ಥಿಕ ವರ್ಷ ಸೇರಿ ಮುಂದಿನ ಎಲ್ಲ ಆರ್ಥಿಕ ವರ್ಷಗಳಿಗೆ ಭಾರತದಲ್ಲಿನ ನನ್ನ ಆದಾಯಕ್ಕೂ ಇಲ್ಲಿನ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇನೆ.
ಈ ರೀತಿಯ ನಿಯಮವಿಲ್ಲವಾದರೂ ನನಗಾಗಿ ನಾನು ಈ ಪಾವತಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.