Advertisement

ಕಾನೂನು ಬಾಹಿರ ಹಕ್ಕು ಪತ್ರ ರದ್ದುಪಡಿಸಿ: ಶಾಸಕ ಬಳ್ಳಾರಿ

04:33 PM Feb 28, 2021 | Team Udayavani |

ಬ್ಯಾಡಗಿ: ಹಿಂದಿನ ಸರಕಾರದ ಅವ ಧಿಯಲ್ಲಿ ಜಮೀನು ಹೊಂದಿರುವವರಿಗೆ ಮತ್ತೆ ಅಕ್ರಮ ಸಕ್ರಮದಡಿ ಜಮೀನು ಮಂಜೂರು ಮಾಡಲಾಗಿದೆ. ಇದು ಕಾನೂನು ಬಾಹೀರ.ಅಂತಹ ಪ್ರಕರಣದಲ್ಲಿ ಭೂಮಿ ಪಡೆದವರ ಹಕ್ಕುಪತ್ರಗಳನ್ನು ರದ್ದುಪಡಿಸಬೇಂದು ತಹಶೀಲ್ದಾರ್‌ ರವಿಕುಮಾರ ಕೊರವರ ಅವರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖಡಕ್‌ ಸೂಚನೆ ನೀಡಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಭೆಯಲ್ಲಿ ಮಾತನಾಡಿದಅವರು, ತಾಲೂಕಿನ ಕಲ್ಲೇದೇವರು,ಕೆಂಗೊಂಡ, ಅರಬಗೊಂಡ, ಅಳಲಗೇರಿ,ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿಒಂದೇ ಕುಟುಂಬದ ಸದಸ್ಯರು ಸಾಗುವಳಿಮಾಡಿದ್ದಾರೆ. ಭೂಮಿ ಇದ್ದರೂ ಅವರಿಗೆ ಭೂಮಿಯಾಕೆ ನೀಡಲಾಗಿದೆ? ಇದಕ್ಕೆ ಸ್ಪಷ್ಟನೆ ಕೊಡಿ. ಹಳೆದ ಹತ್ತು ವರ್ಷಗಳಿಂದ ಮೋಟೆಬೆನ್ನೂರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ.ಯಾವ ಆಧಾರದ ಮೇಲೆ ಹಕ್ಕುಪತ್ರಗಳನ್ನುವಿತರಣೆ ಮಾಡಿದ್ದೀದಿ ಎಂದು ಸಭೆಯಲ್ಲಿದ್ದಮೋಟೆಬೆನ್ನೂರ ಗ್ರಾಪಂ ಲೆಕ್ಕಪರಿಶೋಧಕರನ್ನು ತರಾಟೆಗೆ ತೆಗೆದುಕೊಂಡರು.

ಅರ್ಹರಿಗೆ ಸಿಗುತ್ತಿಲ್ಲ ಸೌಲಭ್ಯ: ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಹಿಂಬಾಲಕರ ಓಲೈಕೆಗೆ ನಿಂತ ರಾಜಕೀಯ ಮುಖಂಡರಿಂದಾಗಿ ಸರಕಾರದ ಸೌಲಭ್ಯಗಳು ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಇದಕ್ಕೆ ಸಾಕಷ್ಟು ಉದಾಹರಣೆಗಳು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿವೆ ಎಂದು ಖೇದ ವ್ಯಕ್ತಪಡಿಸಿದರು.

ಇಚ್ಛಾಶಕ್ತಿ ವಿರುದ್ಧ ಕೆಲಸ ಮಾಡಬೇಡಿ: ಸಾಗುವಳಿ ಮಾಡಿ ಮೂರು ಎಕೆರೆ ಜಾಗ ಪಡೆದುಕೊಂಡವರು ಮತ್ತೆ ಎರಡುಎಕರೆ ಭೂಮಿಯಲ್ಲಿ ಹೆಚ್ಚಿನ ಸಾಗುವಳಿಮಾಡುತ್ತಿರುವ ಹಲವು ಪ್ರಕರಣಗಳುತಾಲೂಕಿನಲ್ಲಿವೆ. ಇದರಿಂದಾಗಿ ಸರಕಾರದಯೋಜನೆಗಳನ್ನು ಅನುಷ್ಠಾನ ಮಾಡಲುತಾಲೂಕಿನಲ್ಲಿ ಭೂಮಿಯ ಕೊರತೆಯಾಗುತ್ತಿದೆ.ಆದ್ದರಿಂದ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅರ್ಹರಿಗೆ ಭೂಮಿ ದೊರೆಯುವಂತೆಮಾಡಬೇಕು. ಯಾರದೋ ಒತ್ತಡಕ್ಕೆ ಮಣಿದು ಇಚ್ಛಾಶಕ್ತಿ ವಿರುದ್ಧವಾಗಿ ಕೆಲಸ ಮಾಡಬೇಡಿ ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next