Advertisement

ಅಕ್ಕಮಹಾದೇವಿ ವಚನಗಳು ಸಾರ್ವಕಾಲಿಕ; ಡಾ|ಶಾಂತಾ ಇಮ್ರಾಪೂರ

03:36 PM Apr 07, 2023 | Team Udayavani |

ಧಾರವಾಡ: ಅಕ್ಕಮಹಾದೇವಿ ವಚನಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಅಕ್ಕನ ವಚನಗಳನ್ನು ವಿಶ್ಲೇಷಿಸುತ್ತ ಹೋದಂತೆಲಾ ನಮ್ಮ ಲೌಕಿಕ ಜೀವನ ಹಸನಾಗುವುದು ಎಂದು ಸಾಹಿತಿ ಡಾ| ಶಾಂತಾ ಇಮ್ರಾಪೂರ ಹೇಳಿದರು.

Advertisement

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ವಿಶ್ಲೇಷಣೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೋರ್ವ ಅತಿಥಿ, ಲೇಖಕಿ ಡಾ| ವಿಜಯಾ ಗುತ್ತಲ ಮಾತನಾಡಿ, ಇಂದಿಗೂ ಸ್ತ್ರೀ ಕುಲಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ ಹೊಂದಿದ ಆದ್ಯ ವಚನಗಾರ್ತಿ ಅಕ್ಕಮಹಾದೇವಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಇಂದಿನ ವಚನ ವಿಶ್ಲೇಷಣೆ ಸ್ಪರ್ಧೆ ಸ್ತ್ರೀಯರ ಬೌದ್ಧಿಕ ಗುಣಮಟ್ಟ ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರುಗಲಿ ಎಂದು ಆಶಿಸಿದರು. ಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಜರುಗಿದ ವಚನ ವಿಶ್ಲೇಷಣೆ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರೇಮಾ ನಡಕಟ್ಟಿ ಪ್ರಥಮ, ಮಂಜುಳಾ ಹೊಸೂರ, ಸುವರ್ಣಾ ಗದಿಗೆಪ್ಪಗೌಡರ ದ್ವಿತೀಯ, ಡಾ|ಸುಧಾ ಹುಲಗೂರ, ರೇಖಾ ಜೋಶಿ, ಸುಧಾ ಕಬ್ಬೂರ ತೃತೀಯ ಸ್ಥಾನ, ದೀಪ ಮುಂಡರಗಿ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಜತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.

ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಡಾ|ಶ್ರೀಶೈಲ ಹುದ್ದಾರ, ಡಾ|ಡಿ.ಎಂ. ಹಿರೇಮಠ, ಸಿ.ಜಿ. ಹಿರೇಮಠ, ಎಂ.ಎಂ. ಚಿಕ್ಕಮಠ, ಶ್ರೀಶೈಲಗೌಡ ಕಮತರ ಸೇರಿದಂತೆ ಮಹಿಳಾ ಮಂಟಪದ ಸಲಹಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಮಹಿಳಾ ಮಂಟಪದ ಸಂಚಾಲಕಿ ಡಾ|ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಡಾ|ವಿ. ಶಾರದಾ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಕೌದಿ, ಶಿವಾನಂದ ಭಾವಿಕಟ್ಟಿ ಪರಿಚಯಿಸಿದರು. ಆರುಷ ಮತ್ತು ಆರಾಧ್ಯ ದೊಡವಾಡ ವಚನಗಳ ಮೂಲಕ ಪ್ರಾರ್ಥಿಸಿದರು. ಡಾ|ಅರುಣಾ ಹಳ್ಳಿಕೇರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next