Advertisement

ಅಕ್ಕ ಮಹಾದೇವಿ ಸ್ಮಾರಕ ಅಭಿಮಾನದ ಸಂಗತಿ

12:04 PM Apr 08, 2019 | Naveen |

ಬೀದರ: ಶ್ರೀಶೈಲದಲ್ಲಿ ಮಹಾಶಿವರಣೆ ಅಕ್ಕ ಮಹಾದೇವಿ ಹೆಸರಿನಲ್ಲಿ ಭವ್ಯ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇದು ಸಮಸ್ತ ಕನ್ನಡಿಗರು ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ವಿಶ್ರಾಂತ ಪೊಲೀಸ್‌ ಕಮಿಶನರ್‌ ಬಿ.ಜಿ. ಜ್ಯೋತಿ ಪ್ರಕಾಶ ಮಿರ್ಜಿ ಹೇಳಿದರು.

Advertisement

ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಕೇಂದ್ರದಲ್ಲಿ ನಡೆದ ಅಕ್ಕಮಹಾದೇವಿ ಸಂಸ್ಮರಣೋತ್ಸವ ಹಾಗೂ ನಿತ್ಯಾನ್ನ ದಾಸೋಹ ಭವನದ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದ್ವಾದಶ ಜ್ಯೋತಿರ್ಲಿಂಗಳಲ್ಲಿ ಒಂದಾಗಿರುವ
ಶ್ರೀಶೈಲ ಮಹಾಕ್ಷೇತ್ರದಲ್ಲಿಯ ಅಕ್ಕಮಹಾದೇವಿ ಚೈತನ್ಯ ಕೇಂದ್ರ ಸಮಸ್ತ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿದೆ. ಶ್ರೀಶೈಲವು ಪವಿತ್ರವಾದ ಪುಣ್ಯಕ್ಷೇತ್ರ, ಪ್ರವಾಸಿ ತಾಣ ಮತ್ತು ಐತಿಹಾಸಿಕ ನೆಲೆಯಾಗಿ ಪ್ರಸಿದ್ಧವಾಗಿದ್ದು, ಕೋಟ್ಯಂತರ ಭಕ್ತಾದಿಗಳು ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಇಂತಹ ದಿವ್ಯ ಕ್ಷೇತ್ರದಲ್ಲಿ ಕರುಣಾದೇವಿ ಮಾತಾ ಅವರಿಗೆ ಸ್ಥಳ ದೊರೆತಿರುವುದು ನಮ್ಮೆಲ್ಲರಿಗೆ
ಹೆಮ್ಮೆಯ ಸಂಗತಿಯಾಗಿದೆ. ಇದು ನಿಜವಾಗಿಯೂ ಬಹುದೊಡ್ಡ ಸಾಧನೆ ಎಂದು ಬಣ್ಣಿಸಿದರು.

ಜಾಗತಿಕ ಮಹಿಳಾಶಕ್ತಿಯಾದ ವೈರಾಗ್ಯನಿಧಿ  ಅಕ್ಕ ಮಹಾದೇವಿಯವರ ಜೀವನ ಯಶೋಗಾಥೆಯನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಡುವ ಮಹಾಕನಸು ಹೊತ್ತುಕೊಂಡು ನಿರಂತರ ಪರಿಶ್ರಮಿಸುತ್ತಿರುವ ಮಾತಾ ಕರುಣಾದೇವಿ ಅವರ ಕಾರ್ಯ ಶ್ಲಾಘನಿಯವಾಗಿದೆ. ನಾವೆಲ್ಲರೂ ಇದರ ಯಶಸ್ಸಿಗೆ ಕೈ ಜೋಡಿಬೇಕು. ದಾಸೋಹ ಭವನದ ಭೂಮಿ ಪೂಜೆ ನನ್ನಿಂದ ನೆರವೇರಿಸಿದ್ದು, ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದರು.

ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಂಚಾಲಕ ಡಾ| ರಾಜಶೇಖರ ಶಿವಾಚಾರ್ಯರು ಮಾತನಾಡಿ, ವೈರಾಗ್ಯ, ಜ್ಞಾನ ಮತ್ತು ಆತ್ಮ ಶಕ್ತಿಗೆ ಮತ್ತೊಂದು ಹೆಸರಾದ ಲೋಕಮಾತೆ ಅಕ್ಕಮಹಾದೇವಿ ಜೀವನ ಸಂದೇಶ ವಿಶ್ವವ್ಯಾಪಕವಾಗಬೇಕೆಂಬ ಉದ್ದೇಶದಿಂದ ಚೈತನ್ಯ ಕೆಂದ್ರ ನಿರ್ಮಾಣವಾಗುತ್ತಿದ್ದು, ವರ್ತಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀ ಸಮಾನತೆ ಬಂದರೂ ಕೂಡ ಧಾರ್ಮಿಕ ಕ್ಷೇತ್ರದಲ್ಲಿ ಬರದಿವುದು ಆಶ್ಚರ್ಯ ಸಂಗತಿಯಾಗಿದೆ. ಅದು
ಆಚರಣೆಗೆ ಬಂದಾಗ ಮಾತ್ರ ಶರಣ ಚಳವಳಿಗೆ ಬೆಲೆ ಬರುವುದು. ಈ ಹಿನ್ನಲೆಯಲ್ಲಿ ಎಲ್ಲ ಸತ್ಪುರುಷರ ಜಯಂತಿ ಆಚರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಹೇಮಲತಾ, ಸುಜನ ಆರಾಧ್ಯ, ತೇಜಸ್‌ಕುಮಾರ, ಶಿವಶಂಕರ ಶಾಸ್ತ್ರಿ, ಪಂಕಜಾ ಮಲ್ಲಿಕಾರ್ಜುನ ಮುಂತಾದವರು ಅನುಭಾವ ಹಂಚಿಕೊಂಡರು. ಈ ವೇಳೆ ಜ್ಯೋತಿ
ಪ್ರಕಾಶ ಮಿರ್ಜಿ ಅವರಿಗೆ ಧರ್ಮ ವಿಭೂಷಣ ಪ್ರಶಸ್ತಿ, ಬಸವರಾಜು ಅವರಿಗೆ ಧರ್ಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತದ್ದೆವಾಡಿ ಶರಣರಿಗೆ, ಕೊಳ್ಳೆಗಾಲ, ಕಲಬುರಗಿ ಜಿಲ್ಲೆ ದೇವಲ ಗಾಣಗಾಪುರ ಹಾಗೂ ಸಾಂಗ್ಲಿ ಜಿಲ್ಲೆಯ ಗೂಗವಾಡ ಮುಂತಾದ
ಕಡೆಯಿಂದ ಆಗಮಿಸಿದ್ದ ಪಾದಯಾತ್ರೆ ಸಮಿತಿಯ ಮುಖಂಡರನ್ನು ಸನ್ಮಾನಿಸಲಾಯಿತು.

Advertisement

ಕರುಣಾದೇವಿ ಮಾತಾ, ಬಸವರಾಜ ಹಾಲಹಳ್ಳಿ, ನಟರಾಜ ಸ್ವಾಮಿ, ಕಾಶೀನಾಥ ಬಿರಾದಾರ, ಶ್ರೀದೇವಿ ಮರೂರು, ರೂಪಾ ಭವಾನಿ ಸೋಲಾಪೂರ, ಚೈತನ್ಯ ಸ್ವಾಮಿ ಶ್ರೀಶೈಲ, ಗೌರಮ್ಮಾ ವಿಜಯಕುಮಾರ ಜಗದೆ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next