Advertisement
ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಪಾಕ್‌ನ ಮಾಜಿ ಬೌಲರ್ ಶೋಯಿಬ್ ಅಖ್ತರ್ ಭಾರತಕ್ಕೊಂದು ಮನವಿ ಮಾಡಿದ್ದಾರೆ. ಅದು ಬಹಳ ಸ್ವಾರಸ್ಯಕರವಾಗಿದೆ.“ಈಗ ಭಾರತ ಸಹಾಯ ಮಾಡಿದರೆ ನಾವು ಸೆಮಿಫೈನಲ್‌ಗೆ ಏರಬಹುದು. ಹೇಗೆಂದರೆ, ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವುದು. ಆಗ ಇಂಗ್ಲೆಂಡ್ ಹೊರಬೀಳುತ್ತದೆ. ಪಾಕ್ ಮುಂದಿನೆರಡೂ ಪಂದ್ಯಗಳನ್ನು ಗೆದ್ದರೆ ಆಗ 11 ಅಂಕವಾಗುತ್ತದೆ. 4ನೇ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸಬಹುದು. ಹೀಗಾಗಿ ಹೇಗಾದರೂ ಇಂಗ್ಲಂಡ್ ವಿರುದ್ಧ ಗೆದ್ದು ಬನ್ನಿ…’ ಎಂದು ಭಾರತವನ್ನು ವಿನಂತಿಸಿದ್ದಾರೆ ಅಖ್ತರ್. ಯೂಟ್ಯೂಬ್‌ಗ ಅಪ್‌ಲೋಡ್ ಮಾಡಿರುವ ಈ ವೀಡಿಯೊ ಈಗ ಚರ್ಚೆಗೆ ಗ್ರಾಸವಾಗಿದೆ.
“ಪಾಕಿಸ್ಥಾನ ಕ್ಷಿಪ್ರವಾಗಿ ಚೇತರಿಸಿಕೊಂಡು ಮೇಲೆದ್ದು ಬಂದಿದೆ. ಈಗ ಭಾರತೀಯರ ಸರದಿ. ನೀವು ನಮಗೆ ಸಹಾಯ ಮಾಡಿ. ಇಂಗ್ಲಂಡನ್ನು ಸೋಲಿಸಿ. ನಾವು ನಮ್ಮ 2 ಪಂದ್ಯಗಳನ್ನು ಗೆಲ್ಲುತ್ತೇವೆ. ಸೆಮಿಫೈನಲ್‌ನಲ್ಲಿ ಮತ್ತೂಮ್ಮೆ ಮುಖಾಮುಖೀಯಾಗೋಣ. ಆಗ ನಿಮ್ಮನ್ನು ಸೋಲಿಸುತ್ತೇವೆ’ ಎಂದು ಅಖ್ತರ್ ಈ ವೀಡಿಯೊದಲ್ಲಿ ಹೇಳಿದ್ದಾರೆ. ಒಂದು ವೇಳೆ ಭಾರತದ ವಿರುದ್ಧ ಇಂಗ್ಲೆಂಡ್ ಗೆದ್ದರೂ ನ್ಯೂಜಿಲ್ಯಾಂಡ್ ವಿರುದ್ಧ ಸೋತರೆ ಕೂಟದಿಂದ ಹೊರಬೀಳಲಿದೆ. ಆದರೆ ಇವೆಲ್ಲ ಆದರೆ… ಹೋದರೆ… ಲೆಕ್ಕಾಚಾರಗಳು.