ಪಣಜಿ: ನಿಗಮ ಸ್ಥಾಪಿಸಬೇಕು, ಈ ಕುರಿತು ಯಾವ ಪಕ್ಷ ನಮಗೆ ಭರವಸೆ ನೀಡಲಿದೆ ಆ ಪಕ್ಷವನ್ನು ನಮ್ಮ ಸಂಘಟನೆ ಬೆಂಬಲಿಸಲಿದೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ ಆಗ್ರಹಿಸಿದ್ದಾರೆ.
ಸ್ಥಳೀಯ ಸುದ್ಧಿವಾಹಿಸಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಗೋವಾದಲ್ಲಿರುವ ಕರ್ನಾಟಕದ ಕೂಲಿ ಕಾರ್ಮಿಕರನ್ನು ಹೊರಗಿನವರು ಎಂದು ನಮ್ಮ ಜನರ ಯಾವ ಕೆಲಸವೂ ಆಗುವುದಿಲ್ಲ. ವಿವಿಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಈ ಕಾರ್ಮಿಕರ ಮತಕ್ಕಾಗಿ ರಾಜಕಾರಣಿಗಳು ಬರುತ್ತಾರೆ. ಆದರೆ ತಾವು ಚುನಾವಣೆಯಲ್ಲಿ ಚುನಾಯಿತರಾದ ನಂತರ ಈ ಕೂಲಿ ಕಾರ್ಮಿಕರನ್ನು ಕೇಳುವವರೇ ಇಲ್ಲ. ಇವರು ಹೊರಗಿನವರು, ಇವರು ಒಳಗಿನವರು ಎಂದು ಬೇರೆ ಬೇರೆ ಮಾಡುತ್ತಾರೆ. ನಾವೆಲ್ಲರೂ ಭಾರತೀಯರು. ನಾವು ಇಲ್ಲಿ ಕಳ್ಳತನ ಮಾಡುತ್ತಿಲ್ಲ, ಇಲ್ಲಿ ಶ್ರಮಪಟ್ಟು ದುಡಿಯುತ್ತಿದ್ದೇವೆ. ಗೋವಾದ ಜನರು ಯಾರೂ ಕರ್ನಾಟಕದಲ್ಲಿ ವಿವಿಧೆಡೆ ಉದ್ಯೋಗದಲ್ಲಿದ್ದಾರೆ. ಗೋವಾಕ್ಕೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಕೂಡ ಕನ್ನಡಿಗರ ಕೊಡುಗೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಗೋವಾದ ಅಭಿವೃದ್ಧಿಯಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಇದರಿಂದಾಗಿ ಗೋವಾದಲ್ಲಿ ವಲಸಿಗರ ಕಾರ್ಮಿಕರ ಅಭಿವೃದ್ಧಿಗಾಗಿ ವಲಸಿಗರ ನಿಗಮ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.