Advertisement

ಜೈಲಿನಿಂದಲೇ ನಾಮಪತ್ರ ಸಲ್ಲಿಸಿ, ಚುನಾವಣೆ ಗೆದ್ದ ಅಖೀಲ್‌ ಗೊಗೊಯ್‌

07:42 AM May 04, 2021 | Team Udayavani |

ಅಸ್ಸಾಂ: ಜೈಲಿನಲ್ಲಿ ಬಂಧಿಯಾಗಿದ್ದುಕೊಂಡೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಕಾರ್ಯಕರ್ತರಾದ ಅಖೀಲ್‌ ಗೊಗೊಯ್‌, ತಾವು ಸ್ಪರ್ಧಿಸಿದ್ದ ಸಿಬ್‌ಸಾಗರ್‌ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ, ಜೈಲಿನಿಂದಲೇ ಚುನಾವಣೆ ಗೆದ್ದ ಮೊದಲ ಅಸ್ಸಾಮಿಗ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.

Advertisement

2019ರಲ್ಲಿ ಅವರನ್ನು ಅಸ್ಸಾಂ ಸರ್ಕಾರ ಬಂಧಿಸಿತ್ತು. ರೈಜೋರ್ ದಲ್ ಎಂಬ ಪಕ್ಷವನ್ನು ಕಟ್ಟಿಕೊಂಡಿದ್ ಅಖೀಲ್ ಗೊಗೊಯ್ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದರು. ಒಂದೇ ಒಂದು ಪ್ರಚಾರಕ್ಕೂ ಭಾಗಿಯಾಗದೇ ಜಯ ಗಳಿಸಿರುವುದು ವಿಶೇಷ.

ಅಖೀಲ್ ಗೊಗೊಯ್ ಅವರು 57219 ಮತಗಳನ್ನು ಪಡೆದಿದ್ದಾರೆ. ತಮ್ಮ ಸಮೀಪದ ಎದುರಾಳಿ, ಬಿಜೆಪಿಯ ಸುರಭಿ ರಾಜ್‌ಕೊನ್ವಾರಿ ವಿರುದ್ಧ ಅವರು 11,875 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಅಖೀಲ್ ಗೊಗೊಯ್ ಗೆ ಬೆಂಬಲಿಸಿತ್ತು. ಆದರೆ ಸೀಟು ಹಂಚಿಕೆ ಸಮಯದಲ್ಲಿ ಅಖೀಲ್ ಗೆ ಅವಕಾಶ ನೀಡದೆ ತಮ್ಮ ಪಕ್ಷದ ಸುಬ್ರಮಿತ್ರ ಗೊಗೊಯ್ ಗೆ ಟಿಕೆಟ್ ನೀಡಿತ್ತು. ಸದ್ಯ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next