ಇಂಧೋರ್: ಅಧಿಕಾರಿಗೆ ಸಾರ್ವಜನಿಕವಾಗಿ ಕ್ರಿಕೆಟ್ ಬ್ಯಾಟ್‌ನಿಂದ ಥಳಿಸಿ ಬಂಧನಕ್ಕೊಳಗಾಗಿದ್ದ ಮಧ್ಯಪ್ರದೇಶದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಅವರಿಗೆ ಶನಿವಾರ ಸಂಜೆ ಭೂಪಾಲ್ ವಿಶೇಷ ಕೋರ್ಟ್ ಶನಿವಾರ ಸಂಜೆ ಜಾಮೀನು ನೀಡಿದೆ. ಭಾನುವಾರ ಬೆಳಗ್ಗೆ ಜೈಲಿನಿಂದ ಹೊರಬಂದ ಆಕಾಶ್ ಅವರಿಗೆ ಬಿಜೆಪಿ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ.
‘ನಾನು ಜೈಲಿನಲ್ಲಿ ಉತ್ತಮ ಸಮಯವನ್ನೇ ಕಳೆದಿದ್ದೇನೆ,ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಕ್ಷೇಮಕ್ಕಾಗಿ ಯೋಚನೆ ಮಾಡಿದ್ದೇನೆ’ ಎಂದು ಆಕಾಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಂಧೋರ್‌ನಲ್ಲಿ ಜಮಾವಣೆಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಪೊಲೀಸರು ಮತ್ತು ನೂರಾರು ಜನರ ಎದುರೆ ಆಕಾಶ್ ಸರ್ಕಾರಿ ಅಧಿಕಾರಿಯೊಬ್ಬರನ್ನು ಬ್ಯಾಟ್‌ನಿಂದ ಥಳಿಸಿದ್ದರು.
ಬಿಜೆಪಿ ಹಿರಿಯ ನಾಯಕ ಕೈಲಾಷ್ ವಿಜಯವರ್ಗೀಯ ಅವರ ಪುತ್ರ ಆಕಾಶ್ ನಡೆಸಿದ ಹಲ್ಲೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿತ್ತು.