Advertisement

Manipur ರಕ್ತಪಾತದ ಅಟ್ಟಹಾಸಕ್ಕೆ ಸ್ಥಳೀಯರಿಂದ ಎಕೆ 47, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ!

03:06 PM Aug 02, 2023 | Team Udayavani |

ಇಂಫಾಲ್(ಮಣಿಪುರ): ಜನಾಂಗೀಯ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದ ಕಾಂಗ್ವೆ ಮತ್ತು ಮೋರೆಹ್‌ ಪ್ರದೇಶದಲ್ಲಿ ಉದ್ರಿಕ್ತ ಜನರ ಗುಂಪು ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿತ್ತು. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಗಲಭೆ ನಡೆಸುತ್ತಿರುವ ಗುಂಪುಗಳ ಕೈಯಲ್ಲಿ ಪೊಲೀಸ್‌ ಠಾಣೆ, ಶಸ್ತ್ರಾಗಾರದಿಂದ ಅಪಹರಿಸಲ್ಪಟ್ಟ ಭಾರೀ ಪ್ರಮಾಣದ ಆಯುಧಗಳನ್ನು ಬಳಸಿ ಹಿಂಸಾಚಾರಾ ನಡೆಸುತ್ತಿರುವುದಾಗಿ ದ ಪ್ರಿಂಟ್‌ ವರದಿ ಮಾಡಿದೆ.

Advertisement

ಇದನ್ನೂ ಓದಿ:ಜೈಲಿನಿಂದ ಬಂದು ಕೋರ್ಟ್‌ಗೆ ಹಾಜರಾದ ಬೆನ್ನಲ್ಲೇ ಬೈಕ್‌ ಕದ್ದರು

ಸುಮಾರು ಮೂರು ತಿಂಗಳ ಹಿಂದೆ ಮಣಿಪುರ ಪೊಲೀಸರ ಶಸ್ತ್ರಾಗಾರದಿಂದ 200 ಎಕೆ 47 ರೈಫಲ್ಸ್‌, 406 ಕಾರ್ಬೈನ್ಸ್‌, 551 ರೈಫಲ್ಸ್‌ , 250 ಮೆಷಿನ್‌ ಗನ್ಸ್‌ ಹಾಗೂ 5ಲಕ್ಷ ರೌಂಡ್ಸ್‌ ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿತ್ತು. ಆದರೆ ಈವರೆಗೂ ಲೂಟಿಗೈದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಸ್ಥಳೀಯರು ಶಸ್ತ್ರಾಸ್ತ್ರಗಳನ್ನು ಬಳಸಿ ಹಿಂಸಾಚಾರದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.

ಮಣಿಪುರ ಶಸ್ತ್ರಾಗಾರದಿಂದ 4,500ಕ್ಕೂ ಹೆಚ್ಚು ಅತ್ಯಾಧುನಿಕ ಸ್ವಯಂಚಾಲಿತ ಆಯುಧಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಕೇವಲ 1,195 ಆಯುಧಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರ ಅಂಕಿಅಂಶದಲ್ಲಿ ವಿವರಣೆ ನೀಡಲಾಗಿದೆ.

ಮಣಿಪುರ ಘರ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಡೇಟಿನಿಂದ ಸಾವನ್ನಪ್ಪಿರುವುದು ಆಸ್ಪತ್ರೆಯ ದಾಖಲೆಯಿಂದ ಬಯಲಾಗಿರುವುದಾಗಿ ವರದಿ ವಿವರಿಸಿದೆ. ಮಣಿಪುರದಲ್ಲಿ ಸ್ಥಳೀಯರು ಸರ್ವಿಸ್‌ ರಿವಾಲ್ವರ್‌ ಬಳಸಿ ಹಿಂಸಾಚಾರ ನಡೆಸುತ್ತಿದ್ದು, ಅವರು ಬೇರೆ ಯಾವುದೇ ಶಸ್ತ್ರಾಸ್ತ್ರ ಉಪಯೋಗಿಸುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಮೇ 3ರಿಂದ ಮಣಿಪುರದಲ್ಲಿ ಪ್ರಭಾವಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವೆ ಹೊತ್ತಿಕೊಂಡ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ ಮುಂದುವರಿದಿದೆ. ಲೂಟಿಗೈದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳದ ಹೊರತು ಈ ಘರ್ಷಣೆಯನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂಬುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next