Advertisement

ಅಜ್ಮೀರ್ ದರ್ಗಾ: ಗಂಗಾವತಿ ಕಾಂಗ್ರೆಸ್ ಮುಖಂಡರಿಂದ ಹೂ-ಚಾದರ್ ಸಲ್ಲಿಕೆ

05:45 PM Feb 03, 2023 | Team Udayavani |

ಗಂಗಾವತಿ: ಅಜ್ಮೀರ್ ಇತಿಹಾಸ ಪ್ರಸಿದ್ಧ ಹಜರತ್ ಖ್ವಾಜಾ ಮೋಹಿನುದ್ದೀನ್ ಚಿಸ್ತಿ ರವರ ದರ್ಗಾದಲ್ಲಿ 811ನೇ ಉರುಸ್ ನಿಮಿತ್ಯ ನಗರದ ಕಾಂಗ್ರೆಸ್ ಅಲ್ಪಸಂಖ್ಯಾತರ ರಾಜ್ಯ ಮುಖಂಡ ಶೇಖ್‌ ಇಲಿಯಾಸ್‌ ಬಾಬಾ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ದರ್ಗಾಕ್ಕೆ ಹೂ-ಚಾದರ್ ಸಮರ್ಪಿಸಲಾಯಿತು.

Advertisement

ದೇಶದೆಲ್ಲೆಡೆ ಜನತೆ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು. ಎಲ್ಲರಲ್ಲೂ ಸಹೋದರತ್ವ ಬಾಂಧವ್ಯ ಬೆಸೆಯಬೇಕು. ರೈತರಿಗೆ ಉತ್ತಮ ಮಳೆ, ಬೆಳೆ ಉತ್ತಮವಾಗಿ, ಸೌಹಾರ್ದತೆ ಎಲ್ಲರ ಬಾಳಿನಲ್ಲಿ ಸಮೃದ್ಧಿಯಾಗಬೇಕೆಂದು ಪ್ರಾರ್ಥಿಸಲಾಯಿತು.

ಖ್ವಾಜಾಸಾಹೇಬ್ ದರ್ಗಾ ಅವರ ಸುಪುತ್ರರಾದ ಅಲಿಬಾಬಾ, ವಲಿಬಾಬಾ, ಹಖ್‌ಬಾಬಾ, ಹಿರಿಯ ಪತ್ರಕರ್ತ ಎಸ್.ಎಂ. ಪಟೇಲ್, ಕಾಂಗ್ರೆಸ್ ಮುಖಂಡ ಶೇಖ್‌ ಇಲಿಯಾಸ್‌ ಬಾಬಾ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಅಹೆಮದ್ ಬಾಬಾ ಹಟ್ಟಿ, ನಿಸಾರ ಅಹಮದ್, ಶಹಬಾದ್, ಹುಸೇನಸಾಬ್ ಗುಲಬುರ್ಗಾ, ಮನ್ನನ್, ಜುಬೇರ್, ಜಾಕೀರ್ ಹುಸೇನ್, ಚಾಂದ್‌ಪಾಷ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next