Advertisement

ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ

02:45 PM Mar 24, 2023 | Team Udayavani |

ಚೆನ್ನೈ: ತಮಿಳುನಾಡು ಸ್ಟಾರ್ ನಟ ಅಜಿತ್ ಕುಮಾರ್ ತಂದೆ ಪಿ.ಎಸ್.ಮಣಿ(85ವರ್ಷ) ಶುಕ್ರವಾರ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಮಣಿ ಅವರು ನಿಧನರಾಗಿರುವುದಾಗಿ ಪುತ್ರ ಅಜಿತ್ ಕುಮಾರ್ ಮ್ಯಾನೇಜರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಶೇರ್ ಮಾಡಿದ್ದಾರೆ.

Advertisement

ಇದನ್ನೂ ಓದಿ:ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ

ಪಿ. ಸುಬ್ರಮಣಿಯಮ್ ಮಣಿ ಅವರು ಪತ್ನಿ ಮೋಹಿನಿ, ಪುತ್ರರಾದ ಅನುಪ್ ಕುಮಾರ್, ಅಜಿತ್ ಕುಮಾರ್ ಹಾಗೂ ಅನಿಲ್ ಕುಮಾರ್ ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಪಾರ್ಶ್ವವಾಯು ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿದ್ದ ಪಿಎಸ್ ಮಣಿ ಅವರು ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಇಂದು ಬೆಸೆಂಟ್ ನಗರದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಸಿನಿಮಾರಂಗದ ನಟ, ನಟಿಯರು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಜಿತ್ ತಂದೆಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಶರತ್ ಕುಮಾರ್, ಸಾಕ್ಷಿ ಅಗರ್ವಾಲ್ ಸೇರಿದಂತೆ ಹಲವು ನಟ, ನಟಿಯರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ತಂದೆಯ ಅಂತ್ಯಸಂಸ್ಕಾರ ನಮ್ಮ ಹೊಣೆಯಾಗಿದೆ..ಈ ನಿಟ್ಟಿನಲ್ಲಿ ದುಃಖದ ಸಂದರ್ಭದಲ್ಲಿ ನಮ್ಮ ಹಿತೈಷಿಗಳು, ಅಭಿಮಾನಿಗಳು ಖಾಸಗಿತನಕ್ಕೆ ಧಕ್ಕೆಯಾಗದಂತೆ ಘನತೆಯಿಂದ ವರ್ತಿಸುವಂತೆ ಪುತ್ರರು ಮನವಿ ಮಾಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next