Advertisement

ಇತರೆ ರಾಷ್ಟ್ರಗಳ ಜತೆ ತಾಂತ್ರಿಕ ಸಂಬಂಧ ವಿಸ್ತಾರಕ್ಕೆ ಇಂಗಿತ

11:06 PM Oct 04, 2019 | Team Udayavani |

ಹೊಸದಿಲ್ಲಿ: ಹಿಂದೂ ಮಹಾಸಾಗರ ವ್ಯಾಪ್ತಿಯ ರಾಷ್ಟ್ರಗಳ ಜತೆಗಿನ ಬಾಂಧವ್ಯವನ್ನು ದೃಢಗೊಳಿಸಲು ಕೇಂದ್ರ ಸರಕಾರ ಹೊಸ ಯೋಜನೆ ಮುಂದಿಟ್ಟಿದೆ. ಭಾರತ ಹೊಂದಿರುವ ತಾಂತ್ರಿಕ ಮತ್ತು ಇತರ ಸೇನಾ ಅಂಶಗಳನ್ನು ಇತರ ರಾಷ್ಟ್ರಗಳ ಜತೆಗೆ ಹಂಚಿಕೊಳ್ಳಲು ಮುಂದಾಗಿದೆ.

Advertisement

ಪಣಜಿಯಲ್ಲಿ 10 ರಾಷ್ಟ್ರಗಳ ನೌಕಾಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದ 2ನೇ ಗೋವಾ ಕಡಲು ರಕ್ಷಣೆಯ ಸಮ್ಮೇಳನದಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಲ್‌ ಈ ಅಂಶ ಮಂಡಿಸಿದ್ದಾರೆ. “ಹಿಂದೂ ಮಹಾಸಾಗರ ವ್ಯಾಪ್ತಿಯ ರಾಷ್ಟ್ರಗಳ ಜತೆ ತಾಂತ್ರಿಕವಾಗಿ ಮತ್ತು ಮೂಲ ಸೌಕರ್ಯದ ವ್ಯವಸ್ಥೆಯನ್ನು ಇತರ ರಾಷ್ಟ್ರಗಳಿಗೂ ನೀಡ ಬಹುದು. ಹಿಂದಿನ ಸಂದರ್ಭಗಳಲ್ಲೂ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ಎಂಬ ನೆಲೆಯಲ್ಲಿ ಪರಸ್ಪರ ಸಹಕಾರ ನೀಡಿ ದ್ದೇವೆ. ಆದರೆ ಭಾರತ ಕೆಲ ಕ್ಷೇತ್ರಗಳಲ್ಲಿ ನಿರೀಕ್ಷಿತ ಪರಿಣತಿ ಸಾಧಿಸಿಲ್ಲ. ಅದರಲ್ಲಿ ಭಾರತ ಬೆಳವಣಿಗೆ ಸಾಧಿಸುವುದರ ಜತೆಗೆ ಇತರ ರಾಷ್ಟ್ರಗಳೂ ಅದರ ಲಾಭ ಪಡೆಯಲು ಬಯಸುತ್ತೇವೆ. ಸಹಕಾರ ತತ್ವದ ಅಡಿ ಈ ಯೋಜನೆ ಜಾರಿಗೆ ಬಯಸಿದ್ದೇವೆಯೇ ಹೊರತು, ನೌಕಾಪಡೆಗಳ ನಡುವಿನ ಮೈತ್ರಿಕೂಟ ಅಥವಾ ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next