ಜೆಡ್ಡಾ/ಶ್ರೀನಗರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿಚಾರದಲ್ಲಿ ಪದೇ ಪದೆ ಸೋಲು ತ್ತಿರುವ ಪಾಕಿಸ್ಥಾನಕ್ಕೆ ಈಗ ಮತ್ತೂಂದು ಆಘಾತ ಉಂಟಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಹಠಾತ್ ಆಗಿ ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿನ ದೊರೆ ಮೊಹಮದ್ ಬಿನ್ ಸಲ್ಮಾನ್‌ರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರಕ್ಕೆ ಇದ್ದ ಸ್ಥಾನಮಾನ ಹಿಂಪಡೆದ ವಿಚಾರದ ಬಗ್ಗೆ ಭಾರತದ ನಿಲುವನ್ನು ದೊರೆ ಬೆಂಬಲಿಸಿದ್ದಾರೆ. ವಿಶೇಷ ಸ್ಥಾನಮಾನ ನಿಟ್ಟಿನಲ್ಲಿ ಭಾರತ ದೀರ್ಘಕಾಲದಿಂದ ಯಾವ ನಿಲುವು ಹೊಂದಿತ್ತು ಎಂಬ ವಿಚಾರ ಸೌದಿ ಅರೇಬಿಯಾಕ್ಕೆ ತಿಳಿದಿದೆ ಎಂದು ದೋವಲ್‌ಗೆ ದೊರೆ ಹೇಳಿದ್ದಾರೆ. ಇದರ ಜತೆಗೆ ಅರಾಮ್ಕೊ ಮೇಲೆ ನಡೆದ ಡ್ರೋಣ್ ದಾಳಿ ವಿಚಾರದ ಬಗ್ಗೆ ಕೂಡ ಇಬ್ಬರು ಚರ್ಚೆ ನಡೆಸಿದ್ದಾರೆ.
ಮುಖಂಡರ ಬಿಡುಗಡೆ
ಅ.24ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಚುನಾವಣೆ ನಡೆಯಲಿದೆ. ಅದಕ್ಕೆ ಪೂರಕವಾಗಿ ಆ. 5ರಿಂದ ಬಂಧಿತರಾಗಿದ್ದ ಕೆಲ ಮುಖಂಡರನ್ನು ಬಿಡುಗಡೆ ಮಾಡ ಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಮುಖಂಡರಾದ ದೇವೇಂದರ್ ರಾಣಾ ಮತ್ತು ಜಾವೇದ್ ರಾಣಾ ಈ ಮಾಹಿತಿ ಖಚಿತಪಡಿಸಿದ್ದಾರೆ. ಯಾವುದೇ ರಾಜಕೀಯ ಚಟು ವಟಿಕೆಗಳನ್ನು ನಡೆಸಲು ಅಡ್ಡಿಯಿಲ್ಲ ಎಂದು ಸರಕಾರ ಸೂಚಿಸಿದೆ ಎಂದಿ ದ್ದಾರೆ. ಆದರೆ ಈ ಬಗ್ಗೆ ಪ್ರತಿ ಕ್ರಿಯಿಸಿದ ಜಮ್ಮು ವಿಭಾಗೀಯ ಕಮಿಷನರ್ ಸಂಜೀವ್ ವರ್ಮಾ, ಈ ಇಬ್ಬರೂ ಮುಖಂಡರ ವಿರುದ್ಧ ನಾವು ನಿರ್ಬಂಧ ಹೇರಿರಲೇ ಇಲ್ಲ ಎಂದಿದ್ದಾರೆ.