Advertisement

Ajinkya Rahane: ಲೆಸ್ಟರ್‌ಶೈರ್‌ ಸೆಮಿಫೈನಲಿಗೇರಲು ರಹಾನೆ, ಹ್ಯಾಂಡ್ಸ್‌ ಕಾಂಬ್‌ ನೆರವು

10:36 PM Aug 17, 2024 | Team Udayavani |

ಲೆಸ್ಟರ್‌ಶೈರ್‌: ಅಜಿಂಕ್ಯ ರಹಾನೆ ಅವರ ಉತ್ತಮ ಆಟದಿಂದಾಗಿ ಲೆಸ್ಟರ್‌ಶೈರ್‌ ಫಾಕ್ಸಸ್‌ ಕೌಂಟಿ ತಂಡವು ಮೆಟ್ರೊ ಬ್ಯಾಂಕ್‌ ವನ್‌ ಡೆ ಕಪ್‌ ಪ್ರಶಸ್ತಿಗಾಗಿ ನಡೆಯುತ್ತಿರುವ ಪಂದ್ಯಾ ಟದ ಎರಡನೇ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಹ್ಯಾಂಪ್‌ಶೈರ್‌ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಹಾಲಿ ಚಾಂಪಿಯನ್‌ ಲೆಸ್ಟರ್‌ಶೈರ್‌ ತಂಡದ ಈ ಗೆಲುವಿಗೆ ರಹಾನೆ ಅವರಲ್ಲದೇ ಆಸ್ಟ್ರೇಲಿಯದ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಉತ್ತಮ ನೆರವು ನೀಡಿದ್ದರು. ಕಳೆದ ವರ್ಷದ ಫೈನಲ್‌ ಹೋರಾಟದ ಪುನರಾವರ್ತನೆಯಾಗಿದ್ದ ಈ ಕಾದಾಟದಲ್ಲಿ ಇನ್ನೊಂದು ಎಸೆತ ಇರುವಾಗ ಜಯಭೇರಿ ಬಾರಿಸಿದ ಲೆಸ್ಟರ್‌ಶೈರ್‌ ತಂಡವು ರವಿವಾರ ನಡೆಯುವ ಸೆಮಿಫೈನಲ್‌ ಪಂದ್ಯ ದಲ್ಲಿ ಸೋಮರ್ಸೆಟ್‌ ತಂಡವನ್ನು ಎದುರಿಸಲಿದೆ. ಇನ್ನೆರಡು ಪಂದ್ಯಗ ಳಲ್ಲಿ ಜಯ ಸಾಧಿಸಿದರೆ ಲೆಸ್ಟರ್‌ಶೈರ್‌ ಪ್ರಶಸ್ತಿ ಯನ್ನು ತನ್ನಲ್ಲಿ ಉಳಿಸಿಕೊಳ್ಳಲಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಹ್ಯಾಂಪ್‌ಶೈರ್‌ ನಾಯಕ ನಿಕ್‌ ಗಬ್ಬಿನ್ಸ್‌ ಅವರ 136 ರನ್‌ ನೆರವಿನಿಂದ 8 ವಿಕೆಟಿಗೆ 291 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಡಾಸನ್‌ 50 ರನ್‌ ಗಳಿಸಿದ್ದರೆ ಡೊಮಿನಿಕ್‌ ಕೆಲ್ಲಿ 20 ಎಸೆತಗಳಿಂದ 39 ರನ್‌ ಹೊಡೆದಿದ್ದರು.

ಇದಕ್ಕುತ್ತರವಾಗಿ ರಹಾನೆ ಮತ್ತು ಹ್ಯಾಂಡ್ಸ್‌ಕಾಂಬ್‌ ನಾಲ್ಕನೇ ವಿಕೆಟಿಗೆ 128 ರನ್ನುಗಳ ಜತೆಯಾಟ ನಡೆಸಿದ್ದರಿಂದ ಲೆಸ್ಟರ್‌ಶೈರ್‌ 49.5 ಓವರ್‌ಗಳಲ್ಲಿ 7 ವಿಕೆಟಿಗೆ 291 ರನ್‌ ಗಳಿಸಿ ಜಯಭೇರಿ ಬಾರಿಸಿತು. ರಹಾನೆ 70 ಮತ್ತು ಹ್ಯಾಂಡ್ಸ್‌ಕಾಂಬ್‌ 74 ರನ್‌ ಹೊಡೆದರು. ಇವರಿಬ್ಬರು ಈ ಸ್ಪರ್ಧೆಯಲ್ಲಿ ಶತಕದ ಜತೆಯಾಟ ದಾಖಲಿಸಿರುವುದು ಇದು ಮೂರನೇ ಸಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next